Select Your Language

Notifications

webdunia
webdunia
webdunia
webdunia

ಭಾರತದ ಮೊದಲ ಬಜೆಟ್ ಮಂಡಿಸಿದ್ದು ವಿದೇಶಿಗ!

ಭಾರತದ ಮೊದಲ ಬಜೆಟ್ ಮಂಡಿಸಿದ್ದು ವಿದೇಶಿಗ!
ನವದೆಹಲಿ , ಮಂಗಳವಾರ, 1 ಫೆಬ್ರವರಿ 2022 (18:02 IST)
ನವದೆಹಲಿ : ಬಹುನಿರೀಕ್ಷಿತ ಕೇಂದ್ರ ಬಜೆಟನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ.1ರಂದು ಸಂಸತ್ತಿನ ಲೋಕಸಭೆ ಕಲಾಪದಲ್ಲಿ ಮಂಡನೆ ಮಾಡಲಿದ್ದಾರೆ.

ಈ ಬಜೆಟ್ ಹಲವು ಪ್ರಥಮಗಳು ಮತ್ತು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಭಾರತದಲ್ಲಿ ಮೊದಲ ಬಜೆಟ್ ಮಂಡನೆ ಆರಂಭವಾಗಿದ್ದು ಯಾವಾಗ? ಮತ್ತು ಅದರ ಸ್ವರೂಪ ಹೇಗಿತ್ತು?

ಭಾರತದ ಮೊದಲ ಬಜೆಟ್ ಮಂಡಿಸಿದ್ದು 1860ರ ಏ.7ರಂದು. ಆಗ ಭಾರತ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತ್ತು. ಹೀಗಾಗಿ ಈಸ್ಟ್ ಇಂಡಿಯಾ ಕಂಪನಿಯ ರಾಜಕೀಯ ನಾಯಕ ಮತ್ತು ಆರ್ಥಿಕ ತಜ್ಞನಾಗಿದ್ದ ಸ್ಕಾಟ್ಲೆಂಡ್ ಮೂಲದ ಜೇಮ್ಸ್ ವಿಲ್ಸನ್ ಭಾರತದ ಮೊದಲ ಮಂಡಿಸಿದರು.

ಸ್ವತಂತ್ರ ಭಾರತದ ಮೊದಲ ಬಜೆಟ್ ಮಂಡನೆಯಾಗಿದ್ದು 1947ರ ನ.26ರಂದು. ಆಗಿನ ಹಣಕಾಸು ಸಚಿವರಾಗಿದ್ದ ಆರ್.ಕೆ.ಷಣ್ಮುಗಂ ಚೆಟ್ಟಿಅವರು ಈ ಬಜೆಟ್ ಮಂಡಿಸಿದ್ದರು. ದೇಶದಲ್ಲಿ ಸುದೀರ್ಘ ಬಜೆಟ್ ಭಾಷಣ ಮಂಡಿಸಿದ ದಾಖಲೆ, ಹಾಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರಿನಲ್ಲಿದೆ. 2020-21ನೇ ಬಜೆಟ್ ಅನ್ನು ಅವರು 2 ಗಂಟೆ 42 ನಿಮಿಷಗಳ ಕಾಲ ಮಂಡಿಸಿದ್ದರು.

ಇನ್ನೂ 2 ಪುಟ ಬಾಕಿ ಇತ್ತಾದರೂ ಅಸೌಖ್ಯದ ಕಾರಣ ಅವರು ತಮ್ಮ ಭಾಷಣವನ್ನು ಮೊಟಕುಗೊಳಿಸಬೇಕಾಗಿ ಬಂದಿತ್ತು. ಇದರ ಹಿಂದಿನ ದಾಖಲೆ ಕೂಡಾ ನಿರ್ಮಲಾ ಹೆಸರಲ್ಲೇ ಇತ್ತು. 2019ರಲ್ಲಿ ಅವರು 2 ಗಂಟೆ 17 ನಿಮಿಷಗಳ ಕಾಲ ಬಜೆಟ್ ಮಂಡಿಸಿದ್ದರು. ನರಸಿಂಹರಾವ್ ಪ್ರಧಾನಿಯಾಗಿದ್ದ ವೇಳೆ ಮನಮೋಹನ್ ಸಿಂಗ್ 1991ರಲ್ಲಿ ಮಂಡಿಸಿದ ಬಜೆಟ್ ಪ್ರತಿಯಲ್ಲಿ 18650 ಪದಗಳಿದ್ದವು.

Share this Story:

Follow Webdunia kannada

ಮುಂದಿನ ಸುದ್ದಿ

ಯೋಗಿ ಪ್ರಚಾರದಲ್ಲಿ ಗಲಭೆ ?