ನವದೆಹಲಿ : ದೇಶದ ಅತಿದೊಡ್ಡ ಬ್ಯಾಂಕ್ ಎಸ್ಬಿಐ ಹಾಗೂ ಇತರ ಬ್ಯಾಂಕ್ಗಳಾದ ಬ್ಯಾಂಕ್ ಆಫ್ ಬರೋಡಾ (ಬಿಒಬಿ), ಆ್ಯಕ್ಸಿಸ್, ಕೋಟಕ್ ಮಹೀಂದ್ರಾ ತಮ್ಮ ಸಾಲದ ಮೇಲಿನ ಬಡ್ಡಿ ದರಗಳನ್ನು ಶೇ.0.1ರಷ್ಟುಹೆಚ್ಚಿಸಿವೆ. ಇದು ಏ.15ರಿಂದ ಜಾರಿಗೆ ಬರಲಿದೆ.
ಪರಿಣಾಮ, ಸಾಲದ ಇಎಂಐಗಳು ಏರಿಕೆಯಾಗಲಿವೆ. ಸಾಲದ ಮೇಲಿನ ಬಡ್ಡಿ ದರವನ್ನು ಬ್ಯಾಂಕ್ಗಳು ಏರಿಸಿದ್ದು 3 ವರ್ಷದಲ್ಲಿ ಇದೇ ಮೊದಲು. ಶೀಘ್ರದಲ್ಲೇ ಇತರ ಬ್ಯಾಂಕುಗಳೂ ಬಡ್ಡಿ ದರ ಏರಿಕೆ ಮಾಡುವ ಸಾಧ್ಯತೆಯಿದೆ.
ಮಾರ್ಜಿನಲ್ ಕಾಸ್ಟ್ ಆಫ್ ಫಂಡ್್ಸ ಆಧಾರಿತ ಸಾಲದ ಬಡ್ಡಿ ದರ (ಎಂಸಿಎಲ್ಆರ್)ಗಳಿಗೆ ಮಾತ್ರ ಎಸ್ಬಿಐನ ಈಗಿನ ಏರಿಕೆ ಅನ್ವಯಿಸಲಿದೆ. ಇನ್ನಿತರ ಮಾನದಂಡ ಆಧಾರಿತ ಬಡ್ಡಿ ದರಗಳು ಏರಿಕೆಯಾಗಿಲ್ಲ. ಬಡ್ಡಿ ದರ ಏರಿಕೆಯೊಂದಿಗೆ ಒಂದು ವರ್ಷದ ಎಂಸಿಎಲ್ಆರ್ ದರ ಶೇ.7.1ಕ್ಕೂ, ಮೂರು ತಿಂಗಳ ಎಂಸಿಎಲ್ಆರ್ ದರ ಶೇ.6.75ಕ್ಕೂ, ಆರು ತಿಂಗಳ ಎಂಸಿಎಲ್ಆರ್ ದರ ಶೇ.7.05ಕ್ಕೂ ಏರಿಕೆಯಾಗಿದೆ.
ಬ್ಯಾಂಕ್ ಆಫ್ ಬರೋಡಾ, ಆ್ಯಕ್ಸಿಸ್ ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್ಗಳು ಕುಡ ಎಂಸಿಎಲ್ಆರ್ ದರವನ್ನು ಶೇ.0.5ರಷ್ಟುಹೆಚ್ಚಿಸಿವೆ. ಹೀಗಾಗಿ ಎಂಸಿಎಲ್ಆರ್ ಆಧರಿತ ಸಾಲದ ಇಎಂಐ ಹೆಚ್ಚಲಿದೆ.