Select Your Language

Notifications

webdunia
webdunia
webdunia
webdunia

ಟೊಮೆಟೊ ಬೆಲೆಯಲ್ಲಿ ಭಾರೀ ಕುಸಿತ !

ಟೊಮೆಟೊ ಬೆಲೆಯಲ್ಲಿ ಭಾರೀ ಕುಸಿತ !
ಬೆಂಗಳೂರು , ಬುಧವಾರ, 23 ಮಾರ್ಚ್ 2022 (13:42 IST)
ಚಿಕ್ಕಬಳ್ಳಾಪುರ : ಒಂದು ಕಡೆ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು ಜನಸಾಮಾನ್ಯರು ಹೈರಾಣಾಗುವಂತಾಗಿದೆ. ಮತ್ತೊಂದೆಡೆ ಲಕ್ಷ ಲಕ್ಷ ಖರ್ಚು ಮಾಡಿ ರೈತರು ಬೆಳೆದ ಬೆಳೆಗಳ ಬೆಲೆ ಪಾತಾಳಕ್ಕಿಳಿಯುವಂತಾಗಿದೆ.
 
ಲಕ್ಷ ಲಕ್ಷ ಖರ್ಚು ಮಾಡಿ ರೈತ ಬೆಳೆದ ಟೊಮೆಟೊ ಬೆಲೆ ಈಗ ಪಾತಾಳಕ್ಕಿಳಿದಿದ್ದು, ಅನ್ನದಾತ ಅಕ್ಷರಶಃ ನಲುಗಿ ಹೋಗುವಂತಾಗಿದೆ. ಒಂದು ಕೆಜಿ ಟೊಮೆಟೊ 1 ರೂ.ಗೂ ಕಡಿಮೆ ದರಕ್ಕೆ ಬಿಕರಿಯಾಗುತ್ತಿದ್ದು, ರೈತ ಸಾಲದ ಶೂಲಕ್ಕೆ ಸಿಲುಕುವಂತಾಗಿ ದಿಕ್ಕು ತೋಚದಂತಾಗಿದ್ದಾನೆ. 

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಟೊಮೆಟೊ ಮಾರುಕಟ್ಟೆಗೆ ರೈತರೇನೋ ಹಗಲು ರಾತ್ರಿ ಎನ್ನದೇ ಕಷ್ಟಪಟ್ಟು ಬಂಪರ್ ಟೊಮೆಟೊ ಬೆಳೆದು ಲೋಡ್ ಗಟ್ಟಲೇ ಸಾವಿರಾರು ಟನ್ ಟೊಮೆಟೊವನ್ನು ಮಾರುಕಟ್ಟೆಗೆ ಹೊತ್ತು ತರುತ್ತಾರೆ. ಆದರೆ ಈಗ ಚಿಂತಾಮಣಿ ಟೊಮೆಟೊ ಮಾರುಕಟ್ಟೆಯಲ್ಲಿ ಟೊಮೆಟೊ ಖರೀದಿಸುವವರೇ ಕಡಿಮೆಯಾಗಿದ್ದಾರೆ.

ಟೊಮೆಟೊ ಖರೀದಿ ಮಾಡಿದರೂ 15 ಕೆಜಿಯ ಬಾಕ್ಸ್ 10 ರೂಪಾಯಿ, 20 ರೂಪಾಯಿ, ಹೆಚ್ಚೆಂದರೆ 30 ರೂಪಾಯಿಗೆ ಬಿಕರಿಯಾಗುತ್ತಿದೆ. ಇದರಿಂದ 1 ಕೆಜಿ ಟೊಮೆಟೊ 1 ರೂ. ಗಿಂತಲೂ ಕಡಿಮೆ ಬೆಲೆಗೆ ಬಿಕರಿಯಾಗುತ್ತಿದ್ದು, ಟೊಮೆಟೊ ಬೆಳೆದ ರೈತರು ಬೀದಿಪಾಲಾಗುವಂತಾಗಿದೆ ಎಂದು ಟೊಮೆಟೊ ಬೆಳೆಗಾರ, ರೈತ ತಿಪ್ಪಣ್ಣ ತಮ್ಮ ಅಳಲು ತೋಡಿಕೊಂಡಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಪಾಕ್ ಪ್ರಧಾನಿಗೆ ದಂಡ?