ನವದೆಹಲಿ : ಗೃಹ ಬಳಕೆಯ ಎಲ್‍ಪಿಜಿ ಸಿಲಿಂಡರ್ ತೂಕ ಇಳಿಸಲು ಕೇಂದ್ರ ಸರ್ಕಾರ ಚಿಂತಿಸಿದೆ.
ಎಲ್‍ಪಿಜಿ ಸಿಲಿಂಡರ್ ಭಾರವಾಗಿರುವುದರಿಂದ ಅವುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಾಟ ಮಾಡುವುದು ಕಷ್ಟದ ಕೆಲಸ. ಮುಖ್ಯವಾಗಿ ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್ಗಳನ್ನು ಕೊಂಡೊಯ್ಯುವುದೇ ದೊಡ್ಡ ಸಮಸ್ಯೆ.
ಈ ಸಮಸ್ಯೆ ಪರಿಹಾರ ಮಾಡುವ ನಿಟ್ಟಿನಲ್ಲಿ ಸರ್ಕಾರ ಶೀಘ್ರದಲ್ಲೇ ಅವುಗಳ ತೂಕವನ್ನು ಕಡಿಮೆ ಮಾಡುವ ಸುಳಿವನ್ನು ನೀಡಿದೆ.
ಎಲ್‍ಪಿಜಿ ಸಿಲಿಂಡರ್ ತೂಕ ಪ್ರಸ್ತುತ 14.2 ಕೆಜಿ ಇದ್ದು, ಅದರ ಸಾಗಣೆಯಲ್ಲಿ ಭಾರೀ ಸಮಸ್ಯೆಯಾಗುತ್ತದೆ. ಇದನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ಅದರ ತೂಕವನ್ನು ತಗ್ಗಿಸುವ ಬಗ್ಗೆ ಚಿಂತಿಸಿದೆ.
ಸಿಲಿಂಡರ್ ಭಾರೀ ತೂಕದಿಂದ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಾಗಿ ಸಂಸದರಿಬ್ಬರು ಪ್ರಸ್ತಾಪ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ರಾಜ್ಯಸಭೆಯಲ್ಲಿ ಉತ್ತರ ನೀಡಿದ್ದಾರೆ.