7ನೇ ವೇತನ ಆಯೋಗದ ವರದಿ ಜಾರಿಗೆ 12 ಸಾವಿರದಿಂದ 18 ಸಾವಿರ ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.
ಶೇ.17ರಷ್ಟು ಮಧ್ಯಂತರ ಪರಿಹಾರದಿಂದಾಗಿ ಅಂದಾಜು 12 ಸಾವಿರ ಕೋಟಿ ಅವಶ್ಯಕತೆಯಿದೆ. ಹೆಚ್ಚುವರಿ ವೇತನ, ಪಿಂಚಣಿಗಾಗಿ ಬಜೆಟ್ನಲ್ಲಿ 6ಸಾವಿರ ಕೋಟಿ ರೂ. ಈಗಾಗಲೇ ಇಡಲಾಗಿದೆ.
ಉಳಿದ 6 ಸಾವಿರ ಕೋಟಿ ರೂ. ಈಗ ಇತರೆ ಹಂಚಿಕೆಗಳಲ್ಲಿ ಮರು ಹೊಂದಾಣಿಕೆ ಮಾಡಬೇಕಿದೆ. ಸರ್ಕಾರಿ ನೌಕರರ ಸಂಬಳ ಪಿಂಚಣಿಗೆ ಇಟ್ಟಿದ್ದ 18 ಪೈಸೆಗೆ ಈಗ ಹೆಚ್ಚುವರಿ 2 ಪೈಸೆ ಅಗತ್ಯವಿದೆ. ಒಟ್ಟಾರೆ ಮಧ್ಯಂತರ ಪರಿಹಾರದಿಂದ ಸರ್ಕಾರಿ ನೌಕರರ ಸಂಬಳ/ಪಿಂಚಣಿಗೆ ಒಟ್ಟು 20 ಪೈಸೆ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.