Select Your Language

Notifications

webdunia
webdunia
webdunia
webdunia

ಹಿಜಬ್ : ವಿಶೇಷ ಮೇಲ್ಮನವಿಯಲ್ಲಿ ಏನಿದೆ?

ಹಿಜಬ್ : ವಿಶೇಷ ಮೇಲ್ಮನವಿಯಲ್ಲಿ ಏನಿದೆ?
ಬೆಂಗಳೂರು , ಬುಧವಾರ, 16 ಮಾರ್ಚ್ 2022 (00:29 IST)
ಕರ್ನಾಟಕ ಶಿಕ್ಷಣ ಕಾಯಿದೆಯು ಕಾಲೇಜುಗಳಲ್ಲಿ ಸಮವಸ್ತ್ರವನ್ನು ಕಡ್ಡಾಯಗೊಳಿಸುವುದಿಲ್ಲ.

ಹಿಜಬ್ ಅಗತ್ಯದ ಆಚರಣೆಯಲ್ಲ ಎಂದು ಆದೇಶವನ್ನು ಹೊರಡಿಸಲು ಸರ್ಕಾರಕ್ಕೆ ಯಾವುದೇ ಅಧಿಕಾರವನ್ನು ನೀಡುವುದಿಲ್ಲ.

ಹಿಜಬ್ ಧರಿಸುವ ಹಕ್ಕನ್ನು ಸಂವಿಧಾನದ 25ನೇ ವಿಧಿಯಡಿಯಲ್ಲಿ ಆತ್ಮಸಾಕ್ಷಿಯ ಹಕ್ಕಿನ ಭಾಗವಾಗಿ ರಕ್ಷಿಸಲಾಗಿದೆ ಎಂಬುದನ್ನು ಗಮನಿಸಲು ಹೈಕೋರ್ಟ್ ವಿಫಲವಾಗಿದೆ.
ಭಾರತೀಯ ಕಾನೂನು ವ್ಯವಸ್ಥೆಯು ಧಾರ್ಮಿಕ ಚಿಹ್ನೆಗಳನ್ನು ಧರಿಸುವುದು, ಕೊಂಡೊಯ್ಯುವುದನ್ನು ಸ್ಪಷ್ಟವಾಗಿ ಗುರುತಿಸುತ್ತದೆ ಎಂಬುದನ್ನು ಗಮನಿಸಲು ಹೈಕೋರ್ಟ್ ವಿಫಲವಾಗಿದೆ.

ಮೋಟಾರು ವಾಹನ ಕಾಯಿದೆ 1988 ರ ಸೆಕ್ಷನ್ 129ರ ಪ್ರಕಾರ, ಪೇಟ ಧರಿಸಿದ ಸಿಖ್ಖರು ಹೆಲ್ಮೆಟ್ ಧರಿಸುವುದರಿಂದ ವಿನಾಯಿತಿ ನೀಡಿರುವುದು ಗಮನಿಸಬೇಕಾದ ಅಂಶವಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯದ ನಿಯಮಗಳ ಅಡಿಯಲ್ಲಿ ಸಿಖ್ಖರು ಕಿರ್ಪಾನ್ಗಳನ್ನು ವಿಮಾನದಲ್ಲಿ ಸಾಗಿಸಲು ಅನುಮತಿಸಲಾಗಿದೆ. 

ಹಿಜಬ್ ಧರಿಸುವ ಹಕ್ಕು ‘ಅಭಿವ್ಯಕ್ತಿ’ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಸಂವಿಧಾನದ 19(1)(ಎ) ಪರಿಚ್ಛೇದದ ಅಡಿಯಲ್ಲಿ ರಕ್ಷಿಸಲಾಗಿದೆ ಎಂಬುದನ್ನು ಗಮನಿಸಲು ಹೈಕೋರ್ಟ್ ವಿಫಲವಾಗಿದೆ.

ಸಮವಸ್ತ್ರಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಶಿಕ್ಷಣ ಕಾಯಿದೆ, 1983 ಮತ್ತು ಅದರ ಅಡಿಯಲ್ಲಿ ರಚಿಸಲಾದ ನಿಯಮಗಳು, ವಿದ್ಯಾರ್ಥಿಗಳು ಧರಿಸಲು ಯಾವುದೇ ಕಡ್ಡಾಯ ಸಮವಸ್ತ್ರವನ್ನು ಒದಗಿಸುವುದಿಲ್ಲ.

ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಸೃಷ್ಟಿಸುವ ಗೂಂಡಾಗಳನ್ನು ನಿಯಂತ್ರಿಸಲು ರಾಜ್ಯ ವಿಫಲವಾದ ಸಮಸ್ಯೆಯನ್ನು ಪರಿಹರಿಸಲು ಹೈಕೋರ್ಟ್ ವಿಫಲವಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯನ್ನೇ ಕೊಲೆ ಮಾಡಿ ನಾಟಕವಾಡಿದ್ದ ಪತಿ ಬಂಧನ