Webdunia - Bharat's app for daily news and videos

Install App

ಪ್ರಧಾನಿ ಮೋದಿ 'ಮನ್ ಕಿ ಬಾತ್'ನ 81ನೇ ಆವೃತ್ತಿಯ ಹೈಲೈಟ್ಸ್

Webdunia
ಭಾನುವಾರ, 26 ಸೆಪ್ಟಂಬರ್ 2021 (12:37 IST)
ನವದೆಹಲಿ, ಸೆ.26 : ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಜನಪ್ರಿಯ ಕಾರ್ಯಕ್ರಮವಾದ ಮನ್ ಕಿ ಬಾತ್ನ 81ನೇ ಸರಣಿಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದು, ನದಿಗಳ ರಕ್ಷಣೆ ಹಾಗೂ ಮಹಾತ್ಮಗಾಂಧಿ ಅವರ ಜನ್ಮ ದಿನಾಚರಣೆ ವೇಳೆ ಖಾದಿ ವಸ್ತುಗಳ ಪ್ರೋತ್ಸಾಹಕ್ಕೆ ಕರೆ ನೀಡಿದ್ದಾರೆ.

ಅಕ್ಟೋಬರ್ 2ರಂದು ಮಹಾತ್ಮಗಾಂಧಿ ಅವರ ಜನ್ಮ ದಿನಾಚರಣೆಯಂದು ಖಾದಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಆಚರಣೆ ಮಾಡಬೇಕು. ಬಾಪು ಅವರು ಸ್ವಚ್ಚತೆಯ ಪ್ರತಿಪಾದಕರಾಗಿದ್ದರು, ಸ್ವಚ್ಚತೆಗಾಗಿ ಸಾಮೂಹಿಕ ಅಭಿಯಾನ ನಡೆಸಿದ್ದರು. ಸ್ವತಂತ್ರದ ಜೊತೆ ಸ್ವಚ್ಚತೆಯ ಕನಸನ್ನು ಕಂಡಿದ್ದರು ಎಂದು ಮೋದಿ ಹೇಳಿದ್ದಾರೆ.
ಸೆಪ್ಟಂಬರ್ನಲ್ಲಿ ನದಿಗಳ ದಿನ ಆಚರಿಸುತ್ತೇವೆ, ನದಿಗಳು ನಿಶ್ವಾರ್ಥವಾಗಿ ನಮಗೆ ನೀರನ್ನು ಕೊಡುತ್ತವೆ. ನದಿಗಳ ಕೊಡುಗೆಯನ್ನು ನಾವು ಸ್ಮರಿಸಿಕೊಳ್ಳಬೇಕು. ಂದು ನಾವು ವಿಶ್ವ ನದಿಗಳ ದಿನವನ್ನು ಆಚರಣೆ ಮಾಡುತ್ತಿದ್ದೇವೆ. ದೇಶಾದ್ಯಂತ ಜನರು ವರ್ಷಕ್ಕೊಮ್ಮೆಯಾದರೂ ನದಿ ಹಬ್ಬ ಆಚರಣೆ ಮಾಡಬೇಕು ಎಂದು ಪ್ರಧಾನಿ ಒತ್ತಾಯಿಸಿದ್ದಾರೆ.
ಭಾರತದ ಪಶ್ಚಿಮ ಭಾಗವಾದಲ್ಲಿ ಅದರಲ್ಲೂ ಗುಜರಾತ್ ಮತ್ತು ರಾಜಸ್ಥಾನದಲ್ಲಿ ನೀರಿ ಅಭಾವ ಇದೆ. ಈ ಪ್ರದೇಶಗಳು ನಿರಂತರವಾಗಿ ಬರದಿಂದ ನರಳುತ್ತಿವೆ. ಗುಜರಾತ್ನಲ್ಲಿ ಮಳೆಗಾಲದಲ್ಲಿ ಜನ ಜಲ್ ಜಿಲಾನಿ ಏಕಾದಶಿ ಆಚರಣೆ ಮಾಡುತ್ತಾರೆ. ಇದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಳೆ ಕೊಯ್ಲು (ಕ್ಯಾಚ್ ದಿ ರೈನ್) ಯೋಜನೆಗೆ ಪೂರಕವಾಗಿದೆ.
ಬಿಹಾರ ಮತ್ತು ಪಶ್ಚಿಮದ ಇತರ ಭಾಗದಲ್ಲಿ ಚತ್ ಹಬ್ಬವನ್ನು ಆಚರಿಸಲಾಗುತ್ತದೆ. ಅಲ್ಲಿ ನದಿಗಳ ದಂಡೆಗಳು ಮತ್ತು ಕಾಲುವೆಗಳ ಸ್ವಚ್ಚತೆ ನಡೆಯಲಿದೆ. ನಾವು ಸಾಮೂಹಿಕ ಶ್ರಮ ಹಾಗೂ ಸಹಕಾರದಿಂದ ನದಿಗಳನ್ನು ಮಾಲೀನ್ಯ ಮುಕ್ತ ಮಾಡಲು ಸಾಧ್ಯವಿದೆ ಎಂದರು.
ತಮಿಳುನಾಡಿನಲ್ಲಿರುವ ನಾಗಾ ನದಿ ಒಣಗಿ ನಿರ್ಜೀವವಾಗುವುದರಲ್ಲಿತ್ತು. ಅಲ್ಲಿನ ಗ್ರಾಮೀಣ ಭಾಗದ ಮಹಿಳೆಯರು ಆಸಕ್ತಿ ವಹಿಸಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೆಲಸ ಮಾಡಿ ನದಿಗೆ ಮರು ಜೀವ ನೀಡಿದ್ದಾರೆ. ಈಗ ಆ ನದಿಯಿಂದ ಸಾಕಷ್ಟು ನೀರು ಸಿಗುತ್ತಿದೆ ಎಂದು ಪ್ರಧಾನಿ ಉಲ್ಲೇಖಿಸಿದರು.
ತಮಗೆ ಸಿಕ್ಕಿರುವ ವಿಶೇಷ ಕೊಡುಗೆಗಳನ್ನು ಇ-ಹರಾಜು ಮೂಲಕ ವಿಕ್ರಯ ಮಾಡಲಾಗುತ್ತಿದ್ದು, ಅದರಿಂದ ದೊರೆಯುವ ಹಣವನ್ನು ನಮಾಮಿ ಗಂಗೆ ಅಭಿಯಾನಕ್ಕೆ ಬಳಕೆ ಮಾಡುವುದಾಗಿ ಮೋದಿ ಹೇಳಿದರು.
ಸಾಲು ಸಾಲು ಹಬ್ಬಗಳು ಬರುತ್ತಿವೆ. ದೇಶದಲ್ಲಿ ಕೋವಿಡ್ ಸಂಪೂರ್ಣ ನಿವಾರಣೆಯಾಗಿಲ್ಲ. ದೇಶ ಸಂಘಟಿತ ಪ್ರಯತ್ನದಿಂದ ಕೋವಿಡ್ ನಿಯಂತ್ರಣದಲ್ಲಿ ಪ್ರತಿದಿನ ದಾಖಲೆ ಬರೆಯುತ್ತಿದೆ. ಯಾರೊಬ್ಬರು ಸುರಕ್ಷಾ ಚಕ್ರದಿಂದ ವಿಭಜನೆಯಾಗಬಾರದು. ಸುರಕ್ಷತಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿ ಕೋವಿಡ್ ವಿರುದ್ದ ಹೋರಾಟ ಮುಂದುವರೆಸಬೇಕು ಎಂದು ಪ್ರಧಾನಿ ಕರೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments