ಒಂದೆಡೆ ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆ ಬ್ಯಾರೆಲ್ಗೆ 105 ಡಾಲರ್ ಮುಟ್ಟಿದೆ.
ಇತ್ತ ಭಾರತದಲ್ಲಿ ಮಧ್ಯಮವರ್ಗದ ಜನರಿಗೆ ಪೆಟ್ರೋಲ್ - ಡೀಸೆಲ್ ಖರೀದಿ ಮಾಡುವುದೂ ಕಷ್ಟ ಎನ್ನುವ ಕಾಲ ಸನ್ನಿಹಿತವಾಗಿದೆ.
ಪೆಟ್ರೋಲ್ ಬೆಲೆ 100ರ ಗಡಿದಾಟಿ 110 ರೂಪಾಯಿಗಳನ್ನೂ ಮುಟ್ಟಿದೆ. ಡೀಸೆಲ್ ದರ ಕೂಡ ಇನ್ನೇನು ರೂ. 100 ಮುಟ್ಟಲು ಸಿದ್ಧವಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿದಂತೆಲ್ಲಾ ಎಲ್ಲಾ ವಸ್ತುಗಳ ಬೆಲೆಯೂ ಏರಿಕೆಯಾಗುತ್ತವೆ.
ಬೆಲೆ ಏರಿಕೆಗೆ ಕಡಿವಾಣ ಹಾಕಲು ನಮಗೆ ಸಾಧ್ಯವಿಲ್ಲ ಎಂದು ಕೇಂದ್ರ ಹೇಳಿದರೆ, ರಾಜ್ಯ ಸರ್ಕಾರ ಇಂಧನದ ಮೇಲಿನ ತೆರಿಗೆ ಕಡಿತಗೊಳಿಸುತ್ತಿಲ್ಲ. ಕೋವಿಡ್ ಹೊಡೆತದಿಂದ ಇನ್ನೂ ಎದ್ದೇಳಲು ಒದ್ದಾಡುತ್ತಿರುವ ಜನರಿಗೆ ಬೆಲೆಯೇರಿಕೆಯ ಬಿಸಿ ಇನ್ನಷ್ಟು ಪೆಟ್ಟು ನೀಡಿದೆ. ನಮ್ಮ ರಾಜ್ಯದ ಪ್ರತೀ ಜಿಲ್ಲೆಯ ಪೆಟ್ರೋಲ್ - ಡೀಸೆಲ್ ಇಂದಿನ ದರ ಈ ಕೆಳಗಿದೆ.