Select Your Language

Notifications

webdunia
webdunia
webdunia
webdunia

ಇಂದು ದೆಹಲಿ ಸೇರಿ ಹಲವೆಡೆ ಮಳೆ!

ಇಂದು ದೆಹಲಿ ಸೇರಿ ಹಲವೆಡೆ ಮಳೆ!
ನವದೆಹಲಿ , ಶುಕ್ರವಾರ, 21 ಜನವರಿ 2022 (05:22 IST)
ಬೆಂಗಳೂರು : ಕರ್ನಾಟಕದಲ್ಲಿ ಮಳೆ ಕಡಿಮೆಯಾಗಿದ್ದು, ರಾಜ್ಯದಲ್ಲಿ ಚಳಿ ಹೆಚ್ಚಾಗಿದೆ. ಮೇಘಾಲಯ, ನಾಗಾಲ್ಯಾಂಡ್ ಮತ್ತು ಮಿಜೋರಾಂನಲ್ಲಿ ಮಳೆಯಾಗುವ ನಿರೀಕ್ಷೆಯಿದೆ.
 
ಪಂಜಾಬ್, ಹರಿಯಾಣ, ದೆಹಲಿ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ ಮತ್ತು ಒಡಿಶಾದಲ್ಲಿ ದಟ್ಟವಾದ ಮಂಜಿನಿಂದ ಕೂಡಿದ ವಾತಾವರಣವಿರಲಿದೆ. ಜಮ್ಮು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದ ಕೆಲವು ಸ್ಥಳಗಳಲ್ಲಿ ಇಂದು ಭಾರೀ ಹಿಮಪಾತವಾಗಲಿದೆ.

ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಮುಂದಿನ 2 ದಿನಗಳಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರದ ಕೆಲವು ಭಾಗಗಳಲ್ಲಿ ಶೀತ ಗಾಳಿ ಇರಲಿದೆ. ಇಂದು ಮಧ್ಯಪ್ರದೇಶದಲ್ಲಿ ಶೀತ ವಾತಾವರಣವಿರಲಿದೆ. ಪಂಜಾಬ್ನಲ್ಲಿ ಇನ್ನೆರಡು ದಿನ ಮಳೆಯಾಗಲಿದೆ.

ಇಂದು ಮತ್ತು ನಾಳೆ ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ, ಉತ್ತರ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಮಳೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

SSLC ಪೂರ್ವಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟ; ಫೆಬ್ರವರಿ 21 ರಿಂದ ಪರೀಕ್ಷೆ ಶುರು