Select Your Language

Notifications

webdunia
webdunia
webdunia
webdunia

ಲಸಿಕೆಯಿಂದ ಕಣ್ಣಿನ ದೃಷ್ಟಿ ಮರಳಿ ಪಡೆದ 70ರ ಅಜ್ಜಿ!

ಮಹಾರಾಷ್ಟ್ರದಲ್ಲಿ ಸಿನಿಮಾಗಳಲ್ಲಿ ನಡೆಯುವ ರೀತಿಯಲ್ಲಿ ಪವಾಡ ನಡೆದಿದೆ. ಕೋವಿಶೀಲ್ಡ್ ಲಸಿಕೆ ಪಡೆದ 70ರ ಅಜ್ಜಿಗೆ ಕಣ್ಣಿನ ದೃಷ್ಟಿ ಮತ್ತೆ ಬಂದಿದೆ

ಲಸಿಕೆಯಿಂದ ಕಣ್ಣಿನ ದೃಷ್ಟಿ ಮರಳಿ ಪಡೆದ 70ರ ಅಜ್ಜಿ!
ಮಹಾರಾಷ್ಟ್ರ , ಬುಧವಾರ, 7 ಜುಲೈ 2021 (19:18 IST)
ಮಹಾರಾಷ್ಟ್ರ : ಕೊರೋನಾ ವೈರಸ್ ಇಡೀ ಜಗತ್ತನ್ನೇ ವ್ಯಾಪಿಸಿ ಜನರ ನೆಮ್ಮದಿಯನ್ನು ಕಿತ್ತು ತಿಂದಿತ್ತು. ಯಾವಾಗ ಕೊರೋನಾ ತಡೆಗಟ್ಟುವ ಸಲುವಾಗಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳು ಭಾರತಕ್ಕೆ ಬಂದಾಗ ಜನರು ಕೊಂಚ ಸಮಾಧಾನಪಟ್ಟರು. ಆದರೂ ಪ್ರಾರಂಭದಲ್ಲಿ ಕೆಲವರು ಕೋವಿಶೀಲ್ಡ್ ಲಸಿಕೆ ಪಡೆಯುವುದರಿಂದ ಪ್ರಾಣ ಕಳೆದುಕೊಂಡರು, ಆರೋಗ್ಯದಲ್ಲಿ ಏರುಪೇರಾಯಿತು ಎಂದೆಲ್ಲಾ ದೂರಿದ್ದರು. ಇದರಲ್ಲಿ ಲಾಭಕ್ಕಿಂತ ಅಡ್ಡ ಪರಿಣಾಮಗಳೇ ಹೆಚ್ಚು ಎಂದು ಹೇಳಿದ್ದರು.











 ಲಸಿಕೆ ಕುರಿತು ನಕಾರಾತ್ಮಕ ಅಂಶಗಳೇ ಹೆಚ್ಚಾಗಿ ಹರಿದಾಡಿದ್ದವು.
ಆದರೆ ಮಹಾರಾಷ್ಟ್ರದಲ್ಲಿ ಸಿನಿಮಾಗಳಲ್ಲಿ ನಡೆಯುವ ರೀತಿಯಲ್ಲಿ ಪವಾಡ ನಡೆದಿದೆ. ಕೋವಿಶೀಲ್ಡ್ ಲಸಿಕೆ ಪಡೆದ 70ರ ಅಜ್ಜಿಗೆ ಕಣ್ಣಿನ ದೃಷ್ಟಿ ಮತ್ತೆ ಬಂದಿದೆ. ಹೌದು ಈಕೆ ಕಣ್ಣಿನ ದೃಷ್ಟಿ ದೋಷದಿಂದ ಬಳಲುತ್ತಿದ್ದರು. ಲಸಿಕೆ ಪಡೆದ ನಂತರ ಅರ್ಧದಷ್ಟು ದೃಷ್ಟಿ ವಾಪಸಾಗಿದೆ ಎಂದು ಹೇಳಿಕೊಂಡಿದ್ದಾರೆ.
ಮಥುರಾಬಾಯಿ ಬಿದ್ವೆ ದೃಷ್ಟಿ ವಾಪಸ್ಸು ಪಡೆದ ಅಜ್ಜಿ. ಇವರು ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯಲ್ಲಿ ನೆಲೆಸಿದ್ದಾರೆ. ಸುಮಾರು 9 ವರ್ಷದವರಿದ್ದಾಗಲೇ ಕಣ್ಣಿನ ಪೊರೆ ಬಂದ ಕಾರಣ ಅವರು ತಮ್ಮ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದರು. ಇವರು ಜೂನ್ 26ರಂದು ಕೋವಿಶೀಲ್ಡ್ ಲಸಿಕೆ ಪಡೆದರು. ಅದರ ಮರುದಿನವೇ ಸುಮಾರು 30 ರಿಂದ 40 ಪ್ರತಿಶತದಷ್ಟು ದೃಷ್ಟಿ ಪಡೆದಿದ್ದಾರೆ ಎಂದು ಜೀ ನ್ಯೂಸ್ ವರದಿ ಮಾಡಿದೆ.
ಬಿದ್ವೆ ಅವರು ಮೂಲತಃ ಜಲ್ನಾ ಜಿಲ್ಲೆಯ ಪರ್ತೂರಿನವರು. ಇವರು ತಮ್ಮ ಸಂಬಂಧಿಕರ ಜೊತೆ ರಿಸೋದ್ ತೆಸಿಲ್ನಲ್ಲಿ ವಾಸವಾಗಿದ್ದಾರೆ. ಕೋವಿಶೀಲ್ಡ್ ಲಸಿಕೆ ಪಡೆದ ನಂತರ ಕಣ್ಣಿನ ದೃಷ್ಟಿ ಬಂದಿರುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.
ಇದಕ್ಕೂ ಮೊದಲು, ಜೂನ್ನಲ್ಲಿ ಮಹಾರಾಷ್ಟ್ರದ 71 ವರ್ಷದ ಅರವಿಂದ್ ಸೋನಾರ್ ಎಂಬ ವೃದ್ಧರೊಬ್ಬರು ವಿಲಕ್ಷಣವಾದ ಹೇಳಿಕೆಯನ್ನು ನೀಡಿದ್ದರು. ಕೋವಿಶೀಲ್ಡ್ ಎರಡೂ ಡೋಸೇಜ್ ತೆಗೆದುಕೊಂಡ ನಂತರ ದೇಹದಲ್ಲಿ ಕಾಂತೀಯ ಶಕ್ತಿ ಉದ್ಭವವಾಗಿದೆ ಎಂದು ಹೇಳಿದ್ದರು. ಈ ಸಂಬಂಧದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಇನ್ನು ಸೂರತ್ನಲ್ಲೂ ಇದೇ ರೀತಿಯ ಘಟನೆ ವರದಿಯಾಗಿತ್ತು. ಪರ್ಬತ್ ಪಟಿಯಾ ಪ್ರದೇಶದ ಸುಭಾಶ್ನಗರ ಸೊಸೈಟಿಯಲ್ಲಿ ವಾಸಿಸುತ್ತಿರುವ ಇಬ್ಬರು ಕುಟುಂಬ ಸದಸ್ಯರಲ್ಲಿ ಲಸಿಕೆ ಪಡೆದ ನಂತರ ಕಾಂತೀಯ ಗುಣಲಕ್ಷಣಗಳನ್ನು ಹೊಂದಿದ್ದಾರೆ ಎಂದು ವರದಿಯಾಗಿತ್ತು. ಪೂನಮ್ ಜಗ್ತಾಪ್, ಅವರ ತಾಯಿ ಮತ್ತು ಮಗ ಕಾಂತೀಯ ಗುಣಲಕ್ಷಣಗಳನ್ನು ತೋರಿಸಿದ್ದಾರೆಂದು ವರದಿಯಾಗಿದೆ, ಇದನ್ನು ಆರಂಭದಲ್ಲಿ ಯಾರೂ ನಂಬಲಿಲ್ಲ. ನಂತರ ಅವರಲ್ಲಿ ಕಂಡು ಬಂದ ಕಾಂತೀಯ ಸ್ಥಿತಿ ಕಂಡು ಗೊಂದಲಕ್ಕೊಳಗಾಗಿದ್ದರು. ಮಗುವನ್ನು ಹೊರತುಪಡಿಸಿ ಜಗ್ತಾಪ್ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಲಸಿಕೆ ನೀಡಲಾಗಿದೆ.
ಮೆಸೆಂಜರ್ ಆರ್ಎನ್ಎ ದೇಹದಾದ್ಯಂತ ಚಲಿಸುವಂತೆ ಮಾಡಲು ಲಸಿಕೆಯಲ್ಲಿ ಮ್ಯಾಗ್ನೆಟಿಸಮ್ ಅನ್ನು ಸೇರಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ) ಫ್ಯಾಕ್ಟ್-ಚೆಕಿಂಗ್ ಆರ್ಮ್, ಪಿಐಬಿ ಫ್ಯಾಕ್ಟ್ ಚೆಕ್ ಇದು ಆಧಾರರಹಿತ ಎಂದು ಹೇಳಿದೆ. ಲಸಿಕೆ ಜನರನ್ನು ಕಾಂತೀಯವಾಗಿಸಲು ಸಾಧ್ಯವಿಲ್ಲ ಮತ್ತು ಅದು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಹೇಳಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಮತಾ ಬ್ಯಾನರ್ಜಿಗೆ 5 ಲಕ್ಷ ದಂಡ