ಬೆಂಗಳೂರು(ಜು.04): ಕೊರೋನಾ ಕಾರಣದಿಂದಾಗಿ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಪಾಸ್ ಮಾಡಿದ್ದ ಸರ್ಕಾರಕ್ಕೆ ರಿಪೀಟರ್ಸ್ಗಳದ್ದೇ ತಲೆನೋವಾಗಿತ್ತು. ನಮ್ಮನ್ನು ಯಾಕೆ ಪಾಸ್ ಮಾಡಿಲ್ಲ ಎಂದು ರಿಪೀಟರ್ಸ್ ವಿದ್ಯಾರ್ಥಿಗಳು ಕೋರ್ಟ್ ಮೊರೆ ಹೋಗಿದ್ದರು.
ಬಳಿಕ ಕೋರ್ಟ್ ಸೆಕೆಂಡ್ ಪಿಯು ಫಲಿತಾಂಶ ಪ್ರಕಟಕ್ಕೆ ತಡೆ ನೀಡಿತ್ತು. ಈ ಎಲ್ಲಾ ಬೆಳವಣಿಗೆಗಳ ಬಳಿಕ ಸರ್ಕಾರ ಒಂದು ನಿರ್ಣಯ ಕೈಗೊಂಡಿದ್ದು, ರಿಪೀರ್ಟರ್ಸ್ನ್ನು ಪಾಸ್ ಮಾಡಲು ಮುಂದಾಗಿದೆ. ಈ ಬಾರಿ ದ್ವಿತೀಯ ಪಿಯು ಫ್ರೆಶರ್ಸ್ ವಿದ್ಯಾರ್ಥಿಗಳಂತೆ, ರಿಪೀಟರ್ಸ್ಗಳನ್ನು ಪರೀಕ್ಷೆ ಇಲ್ಲದೇ ಪಾಸ್ ಮಾಡಲು ನಿರ್ಧರಿಸಿದೆ. ಈ ಬಗ್ಗೆ ನ್ಯೂಸ್ 18ಗೆ ಪಿಯು ಬೋರ್ಡ್ನಿಂದ ಖಚಿತ ಮಾಹಿತಿ ಲಭ್ಯವಾಗಿದೆ.ರಿಪೀಟರ್ಸ್ಗೆ ಗ್ರೇಸ್ ಮಾರ್ಕ್ಸ್ ಕೊಟ್ಟು ಪಾಸ್ ಮಾಡಲು ಪಿಯು ಮಂಡಳಿ ನಿರ್ಧಾರ ಮಾಡಿದೆ. ಈ ಮೊದಲು ಸರ್ಕಾರವು ಫ್ರೆಶರ್ಸ್ ವಿದ್ಯಾರ್ಥಿಗಳನ್ನ ಮಾತ್ರ ಪರೀಕ್ಷೆ ಇಲ್ಲದೆಯೇ ಪಾಸ್ ಮಾಡಿತ್ತು. ರಿಪೀಟರ್ಸ್ ಇದನ್ನ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು.