Publish Date: Wed, 28 Jun 2023 (09:28 IST)
Updated Date: Wed, 28 Jun 2023 (10:29 IST)
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಇಂದು(ಜೂನ್ 28) ಬೆಳಗ್ಗೆ 11 ಗಂಟೆಗೆ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಂಪುಟ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ.
ಗೃಹಲಕ್ಷ್ಮೀ , ಗೃಹಜ್ಯೋತಿ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆ ಜಾರಿ ಬಗ್ಗೆ ಗಂಭೀರ ಸಮಾಲೋಚನೆ ನಡೆಯಲಿದೆ. ಇನ್ನು ಮುಖ್ಯವಾಗಿ ಗೃಹಲಕ್ಷ್ಮೀಯರಿಗೆ ಗುಡ್ನ್ಯೂಸ್ ಸಿಗುವ ಸಾಧ್ಯತೆ ಇದೆ.
ಅರ್ಜಿ ಯಾವಾಗ ಹಾಕುವುದು ಎಂದು ಚಿಂತೆ ಮಾಡುತ್ತಿದ್ದ ಮಹಿಳೆಯರಿಗೆ ಇಂದಿನ ಕ್ಯಾಬಿನೆಟ್ ಸಭೆ ಬಳಿಕ ಉತ್ತರ ಸಿಗಲಿದೆ. ವಿಶೇಷ ಅಂದ್ರೆ, ಗೃಹಲಕ್ಷ್ಮೀ ಗ್ಯಾರಂಟಿಗಾಗಿಯೇ ಪ್ರತ್ಯೇಕ ಆ್ಯಪ್ ರೆಡಿಯಾಗಿದೆ. ಈ ಹಿನ್ನೆಲೆಲ್ಲಿ ಇಂದು ಮನೆ ಯಜಮಾನಿಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆಗಳು ಹೆಚ್ಚಿವೆ.