Select Your Language

Notifications

webdunia
webdunia
webdunia
webdunia

ದೇಶದಲ್ಲಿ ಮಾರ್ಚ್ ವೇಳೆಗೆ ಪೂರ್ಣ ಪ್ರಮಾಣದ 5G ಸೇವೆ

ದೇಶದಲ್ಲಿ  ಮಾರ್ಚ್ ವೇಳೆಗೆ ಪೂರ್ಣ ಪ್ರಮಾಣದ 5G ಸೇವೆ
ನವದೆಹಲಿ , ಗುರುವಾರ, 16 ಜೂನ್ 2022 (10:34 IST)
ನವದೆಹಲಿ : ಭಾರತವು 2023ರ ಮಾರ್ಚ್ ವೇಳೆಗೆ ಪೂರ್ಣ ಪ್ರಮಾಣದ 5ಜಿ ಸೇವೆಗಳನ್ನು ಪಡೆಯಲಿದೆ ಎಂದು ಕೇಂದ್ರ ಸಂವಹನ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.

ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು 5ಜಿ ಸ್ಪೆಕ್ಟ್ರಮ್ ಹರಾಜು ಜುಲೈ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಎಂದ ಅವರು ಟೆಲಿಕಾಂ ಡಿಜಿಟಲ್ ಬಳಕೆಯ ಪ್ರಾಥಮಿಕ ಮೂಲವಾಗಿದೆ. ಟೆಲಿಕಾಂನಲ್ಲಿ ವಿಶ್ವಾಸಾರ್ಹ ಪರಿಹಾರವನ್ನು ತರಲು ಇದು ಬಹಳ ಮುಖ್ಯವಾಗಿದೆ ಎಂದರು.

ಭಾರತವು ತನ್ನದೇ ಆದ 4ಜಿ ಸ್ಟಾಕ್ಗಳಾದ ರೇಡಿಯೋ ಉಪಕರಣಗಳು ಮತ್ತು ಹ್ಯಾಂಡ್ಸೆಟ್ನಂತಹದ್ದನ್ನು ಹೊಂದಿದೆ. ಇದೀಗ 5ಜಿ ಸಿದ್ಧವಾಗಿದೆ. ಇದು 4ಜಿಗಿಂತಲೂ 10ಪಟ್ಟು ವೇಗ ಮತ್ತು ಸಾಮರ್ಥ್ಯವನ್ನು ಹೊಂದಿದ್ದು, 2023ರ ಮಾರ್ಚ್ನಲ್ಲಿ ಇದರ ಸೇವೆ ಪಡೆಯಲಿದೆ ಎಂದು ಹೇಳಿದರು. 

 

Share this Story:

Follow Webdunia kannada

ಮುಂದಿನ ಸುದ್ದಿ

ನಾನು ದಲಿತ ನಾಯಕನಲ್ಲ : ಮಲ್ಲಿಕಾರ್ಜುನ ಖರ್ಗೆ