ಶಿವಮೊಗ್ಗ : ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಮಧಿಸಿದಂತೆ ಶಿವಮೊಗ್ಗ ನಗರ ಬೂದಿ ಮುಚ್ಚಿದ ಕೆಂಡದಂತಿದ್ದು, ಇದೀಗ ಪೊಳೀಸರ ಭದ್ರಕೋಟೆಯಾಗಿದೆ.
ಹರ್ಷನ ಹತ್ಯೆ ಬೆನ್ನಲ್ಲೇ ಖಾಕಿ ಫುಲ್ ಅಲರ್ಟ್ ಆಗಿದೆ. ಶಿವಮೊಗ್ಗ ನಗರದಾದ್ಯಂತ ನಾಳೆ ಬೆಳಗ್ಗೆ 6 ಗಂಟೆವರೆಗೂ ಸೆಕ್ಷನ್ 144 ಜಾರಿ ಮಾಡಲಾಗಿದೆ. ಮುನ್ನೆಚ್ಚರಿಕೆಗಾಗಿ ಶಾಲೆ-ಕಾಲೇಜಿಗೂ ರಜೆ ಘೋಷಣೆ ಮಾಡಲಾಗಿದೆ.
ಭಾನುವಾರ ರಾತ್ರಿ ಹರ್ಷ ಕೊಲೆ ನಡೆದಿತ್ತು. ಮೃತ ಯುವಕನ ಅಂತಿಮ ಮೆರವಣಿಗೆ ಸಾಗುತ್ತಿದ್ದ ಉದ್ರಿಕ್ತರಿಂದ ಕಟ್ಟಡ, ಅಂಗಡಿಗಳಿಗೆ ಕಲ್ಲುತೂರಾಟ ನಡೆದಿದೆ. ಮೆರವಣಿಗೆ ವೇಳೆ ಮುಸ್ಲಿಂ ಪತಾಕೆ ಹಾರಿಸಿದ್ದರಿಂದ ಯುವಕರು ಪ್ರಚೋದನೆ ಒಳಗಾಗಿ ಮೆರವಣಿಗೆ ವೇಳೆಯೇ ಹಿಂಸೆ, ಕಲ್ಲು ತೂರಾಟ ನಡೆದಿದೆ.
ಜಲ್ಲಿಕಲ್ಲು ತುಂಬಿದ ಲಾರಿಯಿಂದ ಉದ್ರಿಕ್ತರು ಕಲ್ಲುಗಳನ್ನು ಎಸೆದಿದ್ದಾರೆ. ಮನೆಗೆ ನುಗ್ಗಿ ಅಟ್ಟಹಾಸ, ಫ್ರಿಡ್ಜ್, ಬೀರು ಜಖಂಗೊಂಡಿದ್ದು ಕಾರುಗಳ ಗಾಜುಗಳು ಪುಡಿಪುಡಿಯಾಗಿದೆ.
ಪೊಲೀಸರ ಮುಂದೆಯೇ ದೊಣ್ಣೆ ಪ್ರದರ್ಶನ ನೀಡಿದ್ದು ಮಚ್ಚು, ಲಾಂಗ್ ಹಿಡಿದು ಕೊಟ್ಟಿದ್ದಾರೆ. ಹಣ್ಣಿನ ತಳ್ಳುಗಾಡಿ ಧ್ವಂಸವಾಗಿದ್ದು ಕಲ್ಲುತೂರಾಟದ ವೇಳೆ ಐದಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.