Select Your Language

Notifications

webdunia
webdunia
webdunia
webdunia

ವಿಜಯೇಂದ್ರ ಟಿಕೆಟ್ ನೀಡಿ: ಕಾರ್ಯಕರ್ತರ ಗಲಾಟೆ

ವಿಜಯೇಂದ್ರ
ಮೈಸೂರು , ಮಂಗಳವಾರ, 24 ಏಪ್ರಿಲ್ 2018 (12:42 IST)
ವಿಜಯೇಂದ್ರನಿಗೆ ಟಿಕೆಟ್ ನೀಡಬೇಕೆಂದು ಕಾರ್ಯಕರ್ತರು ರಾಜ್ಯ ಬಿಜೆಪಿ ಉಸ್ತುವಾರಿಗಳ ಮೀಟಿಂಗ್ ನಡೆಯುತ್ತಿರುವ ಹೋಟೆಲ್ ಮುಂದೆ ಪ್ರತಿಭಟನೆ ನಡೆಸುತ್ತಿದ್ದು, ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆದಿರುವ ಘಟನೆ ನಡೆದಿದೆ.
ಖಾಸಗಿ ಹೋಟೆಲ್ ನಲ್ಲಿ ವರುಣಾ ಟಿಕಟ್ ಬಗ್ಗೆ ಕರ್ನಾಟಕ ರಾಜ್ಯ ಉಸ್ತುವಾರಿ ಹಾಗೂ ಬಿ.ಎಸ್. ಯಡಿಯೂರಪ್ಪ ನಡುವೆ ರಹಸ್ಯ ಮಾತುಕತೆ ನಡೆಯುತ್ತಿದ್ದು, ಈ ವೇಳೆ ಹೋಟೆಲ್ ಮುಂಭಾಗದಲ್ಲಿ ವಿಜಯೇಂದ್ರನಿಗೆ ಟಿಕೆಟ್ ನೀಡಬೇಕೆಂದು ಕಾರ್ಯಕರ್ತರು ಗಲಾಟೆ ಮಾಡಿ ಪ್ರತಿಭಟನೆಗೆ ಮುಂದಾದರು. ಮಧ್ಯಪ್ರವೇಶಿಸಿದ ಪೊಲೀಸರೊಂದಿಗೆ ಮಾತಿನ ಚಕಮಕಿ ಸಹ ನಡೆದಿದೆ.
 
ಕೂಡಲೇ ಹೆಚ್ಚಿನ ಪೊಲೀಸರ ಸಹಾಯದಿಂದ ಪ್ರತಿಭಟನಕಾರರನ್ನ ಹೊರಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದು, ಪ್ರತಿಭಟನಕಾರರು ದೂರದಿಂದಲೇ ತಮ್ಮ ಆಕ್ರೋಶವನ್ನ ವ್ಯಕ್ತ ಪಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಶಿವಮೊಗ್ಗ ಕುರುಕ್ಷೇತ್ರ: ಬಿಎಸ್‌ವೈಗೆ ಆರೆಸ್ಸೆಸ್ ಅಭ್ಯರ್ಥಿ ಟಾಂಗ್