ತಮಿಳುನಾಡು: ಹೆಣ್ಣುಮಕ್ಕಳು ಸ್ವಯಂ ರಕ್ಷಣೆ ಮಾಡಿಕೊಳ್ಳಲು ಕಲಿಯುವ ಕುರಿತು ಜಾಗೃತಿ ಮೂಡಿಸಲು ತಮಿಳುನಾಡಿನ ವಧು ಮದುವೆ ಸೀರೆಯಲ್ಲೇ ಮಾರ್ಷಲ್ ಆರ್ಟ್ಸ್ ಪ್ರದರ್ಶನ ಮಾಡಿದ್ದಾರೆ.
ಮದುವೆಯ ಶಾಸ್ತ್ರಗಳು ಮುಗಿದ ನಂತರ, ಮಂಟಪದಲ್ಲಿ ಅತಿಥಿಗಳು ವಧುವರರಿಗೆ ಶುಭ ಕೋರುವುದು ಸಂಪ್ರದಾಯ. ಆದರೆ ತೂತುಕಡಿಯಲ್ಲಿ ನಡೆದ ಮದುವೆಯೊಂದರಲ್ಲಿ ಆಗಿದ್ದೇ ಬೇರೆ. ಮದುವೆ ಮುಗಿದದ್ದೇ ತಡ, ವಧು ಸೆರಗು ಸೊಂಟಕ್ಕೆ ಬಿಗಿದು, ಶಸ್ತ್ರಾಸ್ತ್ರ ಹಿಡಿದು ಮಂಟಪದಿಂದ ಕೆಳಗಿಳಿದೇ ಬಿಟ್ಟಳು! ಅಯ್ಯಯ್ಯೋ ಯಾಕೇ ಅಂತೀರಾ? ಸುರಾಲು ವಾಲ್ ವೀಚು ಪ್ರದರ್ಶನ ನೀಡಲಿಕ್ಕೆ! ಹೌದು, ತಮಿಳುನಾಡಿನ ತೂತುಕುಡಿ ಜಿಲ್ಲೆಯ ತಿರುಕೋಲೂರ್ ಹಳ್ಳಿಯಲ್ಲಿ, ಮದುವೆಯ ಸೀರೆಯಲ್ಲೇ, ಸಿಲಂಬಮ್ ಕೋಲುಗಳನ್ನು ಹಿಡಿದು ವಧು, ರೆಟೈ ಕಾಂಬು ಪ್ರದರ್ಶನ ನೀಡಿ , ನೆರೆದವರೆಲ್ಲರ ಮನಗೆದ್ದ ಘಟನೆ ನಡೆದಿದೆ. ಆದರೆ ಈ ಪ್ರದರ್ಶನ ನೀಡುವುದರ ಮೂಲ ಉದ್ದೇಶ, ಚಪ್ಪಾಳೆ ಗಿಟ್ಟಿಸಿಕೊಳ್ಳುವುದು ಅಥವಾ ಮನರಂಜನೆ ನೀಡುವುದಾಗಿರಲಿಲ್ಲ. ಜಾಗೃತಿ ಮೂಡಿಸುವುದಾಗಿತ್ತು!
ಹೆಣ್ಣು ಮಕ್ಕಳು ಸ್ವಯಂ ರಕ್ಷಣೆ ಮಾಡಿಕೊಳ್ಳಲು ಕಲಿಯುವ ಕುರಿತು ಜಾಗೃತಿ ಮೂಡಿಸಲು ತಾನು ಮದುವೆಯ ಸೀರೆಯಲ್ಲೇ ಕಸರತ್ತುಗಳನ್ನು ಮಾಡಿ ತೋರಿಸಿದ್ದಾಗಿ ವಧು ನಿಶಾ ಹೇಳಿದ್ದಾರೆ.ಹೆಣ್ಮಕ್ಳೇ ಸ್ಟ್ರಾಂಗು ಗುರು! Female Strong Guru!