Select Your Language

Notifications

webdunia
webdunia
webdunia
webdunia

ರೈತರ ಹಿತಕ್ಕಾಗಿ ಕೃಷಿ ಕಾಯ್ದೆ ರದ್ದು!

Farming Act repealed for the benefit of the farmers
ನವದೆಹಲಿ , ಗುರುವಾರ, 10 ಫೆಬ್ರವರಿ 2022 (13:39 IST)
ನವದೆಹಲಿ : ಪಂಚ ರಾಜ್ಯಗಳ ಚುನಾವಣೆಗೆ ಮುನ್ನಾ ದಿನ ಪ್ರಧಾನಿ ನರೇಂದ್ರ ಮೋದಿ  ಎಎನ್‌ಐ ಸುದ್ದಿಸಂಸ್ಥೆಗೆ ವಿಸ್ತೃತ ಸಂದರ್ಶನವೊಂದನ್ನು ನೀಡಿದ್ದು,
 
ಅದರಲ್ಲಿ ಕೃಷಿ ಕಾಯ್ದೆ, ಪಂಚ ರಾಜ್ಯಗಳ ಚುನಾವಣೆಯಲ್ಲಿ ಪಕ್ಷದ ಗೆಲುವಿನ ಸಾಧ್ಯತೆ, ಇತ್ತೀಚಿನ ಸಂಸತ್‌ ಭಾಷಣದಲ್ಲಿ ಮಾಜಿ ಪ್ರಧಾನಿ ನೆಹರೂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ರಾಹುಲ್‌ ಗಾಂಧಿ ಸವಾಲು, ವಂಶಾಡಳಿತ ಹೀಗೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಬಿಜೆಪಿ ಎಂದಿಗೂ ಜನರ ಸೇವೆ ಮಾಡುತ್ತದೆ. ನಾವು ಅಧಿಕಾರದಲ್ಲಿದ್ದಾಗ ‘ಸಬ್‌ ಕಾ ಸಾತ್‌, ಸಬ್‌ ಕಾ ವಿಕಾಸ್‌’ ಮಂತ್ರದೊಂದಿಗೆ ಕೆಲಸ ಮಾಡುತ್ತೇವೆ.

ಬಿಜೆಪಿ ಆಡಳಿತದ ಎಲ್ಲ ರಾಜ್ಯಗಳಲ್ಲಿ ಈ ಅಲೆಯನ್ನು ನೋಡುತ್ತಿದ್ದೇನೆ. ನಾವು 5 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲೂ ಅಭೂತಪೂರ್ವ ಬಹುಮತದೊಂದಿಗೆ ಗೆಲ್ಲುತ್ತೇವೆ. ಪಂಚರಾಜ್ಯಗಳ ಜನರು ರಾಜ್ಯದ ಸೇವೆಗೆ ಅವಕಾಶ ಕಲ್ಪಿಸಲಿದ್ದಾರೆ.

2014ರಲ್ಲಿ ಗೆದ್ದೆವು. 2017 ಮತ್ತು 2019ರಲ್ಲೂ ಗೆದ್ದೆವು. ಈ ಮೂಲಕ ರಾಜ್ಯದಲ್ಲಿ ಒಂದು ಪಕ್ಷ ಒಮ್ಮೆ ಮಾತ್ರ ಅಧಿಕಾರಕ್ಕೆ ಬರಬಲ್ಲದು ಎಂಬ ಹಳೆಯ ಸಿದ್ಧಾಂತವನ್ನು ಉತ್ತರ ಪ್ರದೇಶದ ಜನರು ಬದಲು ಮಾಡಿದರು. ಅವರು 2014, 2017 ಮತ್ತು 2019ರಲ್ಲಿ ಒಪ್ಪಿಕೊಂಡಿದ್ದಾರೆ. ನಮ್ಮ ಕೆಲಸವನ್ನು ನೋಡಿ 2022ರಲ್ಲೂ ಒಪ್ಪಿಕೊಳ್ಳುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋವ್ಯಾಕ್ಸಿನ್‌ ತೀವ್ರ ಅಭಾವ!