ನವದೆಹಲಿ : ಕೊರೊನಾ ಸಾಂಕ್ರಾಮಿಕ ಇನ್ನೂ ಮುಗಿದಿಲ್ಲ, ಮುಗಿಯುವ ಹಂತದಲ್ಲಿಯೂ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಫೆಬ್ರೆಯೆಸಸ್ ಹೇಳಿದ್ದಾರೆ.
ಕೊರೊನಾ ರೂಪಾಂತರಿ, ಓಮಿಕ್ರಾನ್ ಹರಡುವಿಕೆಯ ವೇಗದ ಬಗ್ಗೆ ಎಚ್ಚರಿಕೆ ಇರಲಿ. ಲಸಿಕೆ ಪಡೆಯದ ಜನರಲ್ಲಿ ಗಂಭೀರವಾದ ಅನಾರೋಗ್ಯ ಮತ್ತು ಸಾವಿನ ಅಪಾಯದ ಪ್ರಮಾಣ ಹೆಚ್ಚಾಗಿರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸೋಂಕಿನ ಅಪಾಯ ತಗ್ಗಿಸುವಲ್ಲಿ ನಿಮ್ಮ ಪ್ರಯತ್ನವೂ ಇರಬೇಕೆಂದು ಜನರನ್ನು ಕೋರಿರುವ ಫೆಬ್ರೆಯೆಸಸ್ ಅವರು ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತಡವನ್ನು ಕಡಿಮೆಗೊಳಿಸಲು ಮನವಿ ಮಾಡಿದ್ದಾರೆ. ಓಮಿಕ್ರಾನ್ ಸೋಂಕು ಸೌಮ್ಯ ಸ್ವಭಾವದ್ದು ಎಂದು ಕೆಲವು ಭಾವಿಸಿದ್ದಾರೆ.