ಬೆಲೆ ಏರಿಕೆ ಆಗಿರುವುದರಿಂದ ಮೊಟ್ಟೆಯಿಂದ ಮಾಡುವ ನಾನ್ ವೆಜ್ ಖಾದ್ಯಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಕೂಡ ಇದ್ದು, ಮೊಟ್ಟೆ ರೇಟ್ ಏರಿದ ಪರಿಣಾಮ ಗ್ರಾಹಕರಿಗೆ ನೇರವಾಗಿ ತಟ್ಟಲಿದೆ.
ಒಂದು ಡಜನ್ ಮೊಟ್ಟೆ ತೆಗೆದುಕೊಳ್ಳುವ ಕಡೆ 6 ಮೊಟ್ಟೆ ತಗೊಳುತ್ತಾ ಇದ್ದೇವೆ. ಚಿಕನ್ ಸಹ ಕಡಿಮೆ ಕೊಳ್ಳತ್ತಾ ಇದ್ದೇವೆ. ಮಟನ್ ಸಹ ಸ್ವಲ್ಪ ಮಟ್ಟಿಗೆ ಹೆಚ್ಚಾಗಿದೆ.
ಬೆಲೆ ಕಡಿಮೆ ಆಗಬೇಕು ಅಂತಾ ನಾನ್ ವೆಜ್ ಪ್ರಿಯರ ಆಗ್ರಹವಾಗಿದೆ. ಒಟ್ಟಿನಲ್ಲಿ ಶ್ರಾವಣಮಾಸ ಬಂದರೆ ಇನ್ನೂ ನಾನ್ವೆಜ್ ವ್ಯಾಪಾರಿಗಳಿಗೆ ಹೊಡೆತ ಬೀಳುತ್ತದೆ. ಸದ್ಯಕ್ಕೆ ನಾನ್ ವೆಜ್ ಪ್ರಿಯರ ಜೇಬನ್ನು ಮೊಟ್ಟೆ, ಚಿಕನ್ ಸುಡುತ್ತಿವೆ.