ಎಲಿಜಬೆತ್ ಹಿರಿಯ ಪುತ್ರ 3ನೇ ಚಾರ್ಲ್ಸ್ ಬ್ರಿಟನ್ ರಾಜನಾಗಿ ಆಯ್ಕೆ

Webdunia
ಶನಿವಾರ, 10 ಸೆಪ್ಟಂಬರ್ 2022 (11:49 IST)
ಲಂಡನ್ : ಬ್ರಿಟನ್ ದೇಶವನ್ನು ಅತ್ಯಧಿಕ ಕಾಲ ಆಳಿದ ರಾಣಿ 2ನೇ ಎಲಿಜಬೆತ್ ಗುರುವಾರ ನಿಧನ ಹೊಂದಿರುವುದಕ್ಕೆ ದೇಶ ವಿದೇಶಗಳಲ್ಲಿ ಸಂತಾಪ ವ್ಯಕ್ತವಾಗುತ್ತಿದೆ.

ಇದೀಗ ಎಲಿಜಬೆತ್ ಹಿರಿಯ ಪುತ್ರ ವೇಲ್ಸ್ ಮಾಜಿ ಯುವರಾಜ 3ನೇ ಚಾರ್ಲ್ಸ್ ಬ್ರಿಟನ್ ದೇಶಕ್ಕೆ ನೂತನ ರಾಜರಾಗಲಿದ್ದಾರೆ.

ಬ್ರಿಟನ್ನ ರಾಜ ಅಥವಾ ರಾಣಿ ಕಣ್ಮುಚ್ಚಿದ 24 ಗಂಟೆಯಲ್ಲಿ ಉತ್ತರಾಧಿಕಾರಿ ಹೆಸರು ಘೋಷಣೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ರಾಜ ಚಾರ್ಲ್ಸ್, ರಾಣಿ ಕೆಮಿಲ್ಲಾ ಪಾರ್ಕರ್ ಇಂದು ಸ್ಕಾಟ್ಲೆಂಡ್ನಿಂದ ಲಂಡನ್ ತಲುಪಿದ್ದಾರೆ. ಚಾರ್ಲ್ಸ್ ಅವರು ಶನಿವಾರ ಬ್ರಿಟನ್ನ ಹೊಸ ರಾಜನೆಂದು ಅಧಿಕೃತವಾಗಿ ಘೋಷಣೆಯಾಗಲಿದ್ದಾರೆ.

ಹೊಸ ರಾಜನ ನೇಮಕಕ್ಕೆ ಬ್ರಿಟನ್ನ ಹಿರಿಯ ಮಂತ್ರಿಗಳು, ನ್ಯಾಯಮೂರ್ತಿಗಳು, ಧಾರ್ಮಿಕ ಮುಖಂಡರು ಸಭೆ ಸೇರಿ ಚರ್ಚೆ ನಡೆಸಿದ್ದಾರೆ. ತುರ್ತು ಸಂಸತ್ ಅಧಿವೇಶನ ನಡೆಸಿ, ಹೊಸ ರಾಜನಿಗೆ ವಿಧೇಯತೆ ತೋರಿಸಿದ್ದಾರೆ. ಬಳಿಕ ನೂತನ ರಾಜನ ಹೆಸರನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಧಾನಸಭೆ ಚುನಾವಣೆ, ಬಿಹಾರದಲ್ಲಿ ರಾಹುಲ್ ಗಾಂಧಿ ಮೊದಲ ರ್ಯಾಲಿ

ದ್ವೇಷ ಭಾಷಣ ಮಾಡುವವರ ಬಗ್ಗೆ ಮಂಗಳೂರಿನಲ್ಲಿ ಗುಡುಗಿದ ಸಿದ್ದರಾಮಯ್ಯ

ಮಹತ್ವದ ಪೋಸ್ಟ್ ಹಂಚಿಕೊಂಡ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌

ತನ್ನವರನ್ನು ಕಳೆದುಕೊಂಡ ಸಂತ್ರಸ್ತರ ಕುಟುಂಬದ ಜತೆ ವಿಜಯ್ ನಡೆ ಹೇಗಿತ್ತು ಗೊತ್ತಾ

ಸಿಎಂ ಬದಲಾವಣೆ ಚರ್ಚೆಯ ನಡುವೆ ಸ್ಫೋಟಕ ಹೇಳಿಕೆ ಕೊಟ್ಟ ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments