Select Your Language

Notifications

webdunia
webdunia
webdunia
webdunia

ಇಂದು ದ್ರೌಪದಿ ಮುರ್ಮು ಪ್ರಮಾಣ ವಚನ ಸ್ವೀಕಾರ

ರಾಷ್ಟ್ರಪತಿ
ನವದೆಹಲಿ , ಸೋಮವಾರ, 25 ಜುಲೈ 2022 (09:25 IST)
ನವದೆಹಲಿ : ದೇಶದ 15ನೇ ರಾಷ್ಟ್ರಪತಿ, ಪ್ರಥಮ ಪ್ರಜೆಯಾಗಿ ಇಂದು ಬೆಳಗ್ಗೆ 10.15ಕ್ಕೆ ದ್ರೌಪದಿ ಮುರ್ಮು ಅಧಿಕಾರ ಸ್ವೀಕರಿಸಲಿದ್ದಾರೆ.
 
ಸಾಮಾನ್ಯ ಶಿಕ್ಷಕಿಯಾಗಿದ್ದ ಬುಡಕಟ್ಟು ಸಮುದಾಯದ ಮುರ್ಮು ಅವರು ಸಂಸತ್ನ ಸೆಂಟ್ರಲ್ ಹಾಲ್ನಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಎನ್.ವಿ ರಮಣ ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ. 

20 ಜೂನ್ 1958 ಜನಿಸಿದ ಅವರು ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು. ಮುರ್ಮು ದೇಶದ ಮೊದಲ ಬುಡಕಟ್ಟು ಮಹಿಳಾ ರಾಷ್ಟ್ರಪತಿಯಾಗಿದ್ದು, ಸ್ವಾತಂತ್ರ್ಯೊತ್ತರ ಜನಿಸಿದ ವ್ಯಕ್ತಿಯೊಬ್ಬರು ರಾಷ್ಟ್ರಪತಿಯಾಗಿತ್ತಿರುವುದು ಇದೇ ಮೊದಲು.

ಇನ್ನು, ದ್ರೌಪದಿ ಮುರ್ಮು ಪದಗ್ರಹಣ ಹಿನ್ನೆಲೆಯಲ್ಲಿ ಸ್ವಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ನಿವಾಸಕ್ಕೆ ದಂಡ ವಿಧಿಸಿದ ಕಾರ್ಪೊರೇಷನ್?