ಭಾರತದ ಅನೇಕ ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಬೋಧನೆಗೆ ಪಿಎಚ್ಡಿ ಕಡ್ಡಾಯ ಎನ್ನಲಾಗಿತ್ತು.
ಆದರೆ ಇದೀಗ ವಿಶ್ವವಿದ್ಯಾಲಯ ಅನುದಾನ ಆಯೋಗವು ತನ್ನ ಮಹತ್ತರ ನಿರ್ಧಾರವನ್ನು ಪ್ರಕಟಿಸಿದ್ದು,
ವಿಶ್ವವಿದ್ಯಾನಿಲಯಗಳಲ್ಲಿ ಬೋಧಕರಾಗಿ ಹೆಚ್ಚಿನ ಉದ್ಯಮ ತಜ್ಞರನ್ನು ಹೊಂದಲು ಈ ಹಿಂದೆ ಕಡ್ಡಾಯ ಗೊಳಿಸಿದ್ದ ಪಿಹೆಚ್ಡಿ ಅಗತ್ಯತೆಯನ್ನು ತೆಗೆದುಹಾಕಲು ನಿರ್ಧರಿಸಿತ್ತು.
ಇದು ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ನಾಂದಿಗೆ ಕಾರಣವಾಗಲಿದೆ ಎನ್ನಲಾಗಿದೆ. ಮಾತ್ರವಲ್ಲ ಆಯಾಯ ಕ್ಷೇತ್ರಗಳ ಪರಿಣಿತರು, ಉದ್ಯಮದ ತಜ್ಞರು ಮತ್ತು ವೃತ್ತಿಪರರನ್ನು ಶಿಕ್ಷಣ ಕ್ಷೇತ್ರದತ್ತ ಸಳೆಯುವ ನಿಟಗ್ಟಿನಲ್ಲಿ ಯುಜಿಸಿ ಈ ನಿರ್ಧಾರ ಕೈಗೊಂಡಿದೆ ಎಂದು ಅಂದಾಜಿಸಲಾಗಿದೆ.
ಯುಜಿಸಿ, ವಿಶೇಷ ಹುದ್ದೆಗಳನ್ನು ರಚಿಸಲು ಯೋಜನೆ ಹಾಕಿಕೊಂಡಿದೆ. ಈ ಹೊಸ ಹುದ್ದೆಗಳು ಪ್ರಾಕ್ಟೀಸ್ ಪ್ರಾಧ್ಯಾಪಕ ಮತ್ತು ಪ್ರಾಕ್ಟೀಸ್ ಸಹ ಪ್ರಾಧ್ಯಾಪಕ ಆಗಿರಲಿದೆ ಈ ಮೂಲಕ ಪಿಎಚ್ಡಿ ಇಲ್ಲದವರಿಗೂ ಶಿಕ್ಷಣ ಕ್ಷೇತ್ರದಲ್ಲಿ ಬೋಧನೆಗೆ ಅವಕಾಶ ಮಾಡಿಕೊಡಲಾಗುತ್ತದೆ .