Publish Date: Mon, 27 Sep 2021 (12:19 IST)
Updated Date: Mon, 27 Sep 2021 (12:22 IST)
ಹುಬ್ಬಳಿ : ಜನರು ಈಗಷ್ಟೇ ಕೊರೋನಾ ಹೊಡೆತದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಬಂದ್ ಮಾಡಿ ಜನರಿಗೆ, ವಿದ್ಯಾರ್ಥಿಗಳಿಗೆ ತೊಂದರೆ ಕೊಡಬೇಡಿ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಭಾರತ್ ಬಂದ್ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡಬೇಡಿ. ನಿಮ್ಮ ವೈಯಕ್ತಿಕತೆಯ ಹಿನ್ನಲೆಯಲ್ಲಿ ಹೋರಾಟ ಮಾಡುವುದಾದರೇ ಮಾಡಿ ಎಂಬುದಾಗಿ ಸಲಹೆ ನೀಡಿದರು.
ಇನ್ನೂ ಮುಂದುವರೆದು ಕಾಂಗ್ರೆಸ್ ಕುರಿತಂತೆ ಮಾತನಾಡಿದ ಅವರು, ಕಾಂಗ್ರೆಸ್ ಒಂದು ಗುಲಾಮಗಿರಿ ಪಾರ್ಟಿ, ಸಿದ್ದರಾಮಯ್ಯ ಬಿಜೆಪಿ ಆಡಳಿತ ನೋಡಿ ಹತಾಶರಾಗಿದ್ದಾರೆ. ಅವರು ಈ ಹಿಂದೆ ನಡೆದುಕೊಂಡ ರೀತಿಗೂ, ಈಗ ನಡೆದುಕೊಳ್ಳುತ್ತಿರೋದಕ್ಕೂ ತಕ್ಕದಲ್ಲ ಎಂದರು.