Select Your Language

Notifications

webdunia
webdunia
webdunia
webdunia

ಅನಿತಾ ಕುಮಾರಸ್ವಾಮಿ ಬಳಿ ಇರುವ ಆಸ್ತಿ ಎಷ್ಟು ಗೊತ್ತಾ?

ರಾಮನಗರ
ಬೆಂಗಳೂರು , ಮಂಗಳವಾರ, 16 ಅಕ್ಟೋಬರ್ 2018 (07:20 IST)
ರಾಮನಗರ : ರಾಮನಗರ ವಿಧಾನಸಭ ಕ್ಷೇತ್ರದ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಅನಿತಾ ಕುಮಾರಸ್ವಾಮಿ ತಮ್ಮ ಆಸ್ತಿ ವಿವರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದಾರೆ.


ಚುನಾವಣಾ ಆಯೋಗಕ್ಕೆ ನೀಡಿರುವ ಮಾಹಿತಿಯಂತೆ ಒಟ್ಟು 64,22,61,822 ರೂಪಾಯಿ ಚರಾಸ್ತಿಯನ್ನು ಹೊಂದಿದ್ದು, ಇದರಲ್ಲಿ 8,14,86,685 ರೂಪಾಯಿ ಸಾಲವನ್ನು ಹೊಂದಿದ್ದಾರೆ. ಅಲ್ಲದೇ ಅನಿತಾ ಕುಮಾರಸ್ವಾಮಿಯವರ ವಾರ್ಷಿಕ ಆದಾಯ 76,35,650 ರೂ. ಆಗಿದೆ.


ಹಾಗೆ ಬೆಂಗಳೂರಿನ ಜಯನಗರದ 4ನೇ ಬ್ಲಾಕ್‍ನಲ್ಲಿ 14 ಕೋಟಿ ರೂ. ಹಾಗೂ ದೊಡ್ಡನಕುಂಟೆ ಬಳಿ 16 ಕೋಟಿ ರೂ. ಮೌಲ್ಯದ ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದಾರೆ. 28,29,557 ರೂ ಮೌಲ್ಯದ ಹಾರ್ಲೇ ಡೆವಿಡ್ಸನ್ ಬೈಕ್ ಹಾಗೂ ಪ್ರಚಾರದ ಬಸ್ ಒಂದನ್ನು ಹೊಂದಿದ್ದಾರೆ.


ಇಷ್ಟೇ ಅಲ್ಲದೇ ಸದ್ಯ ಕೈಯಲ್ಲಿ 42,36,638 ರೂಪಾಯಿ ಹಣ ಇದ್ದು, ಬ್ಯಾಂಕುಗಳಲ್ಲಿ 1,90,88,775 ರೂಪಾಯಿ ಇಟ್ಟಿದ್ದಾರೆ. ಇದಲ್ಲದೇ ವಿವಿಧ ಕಂಪೆನಿಗಳು ಹಾಗೂ ಷೇರು ಮಾರುಕಟ್ಟೆ ಮೇಲೆ 68,79,58,000 ರೂ. ಹೂಡಿಕೆ ಮಾಡಿದ್ದಾರೆ. ಇದರ ಜೊತೆ 93,30,000 ರೂ. ಚಿನ್ನಾಭರಣವನ್ನು ಹೊಂದಿದ್ದು, ಇದರಲ್ಲಿ 2.6 ಕೆಜಿ ಚಿನ್ನಾಭರಣ, 17 ಕೆಜಿ ಬೆಳ್ಳಿ ಹಾಗೂ 40 ಗ್ರಾಂ ಕ್ಯಾರೇಟ್ ಡೈಮಂಡ್ ಇದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಲವ್ ಬ್ರೇಕ್ ಅಪ್ ಆಗಿದ್ದಕ್ಕೆ ಪಾಗಲ್ ಪ್ರೇಮಿ ತನ್ನ ಪ್ರೇಯಸಿಗೆ ಮಾಡಿದ್ದೇನು ಗೊತ್ತಾ?