Select Your Language

Notifications

webdunia
webdunia
webdunia
webdunia

ಗೃಹ ಆರೋಗ್ಯ ಜಾರಿಗೆ ಇಲಾಖೆ ಚಿಂತನೆ: ಏನಿದು ?

ಗೃಹ ಆರೋಗ್ಯ ಜಾರಿಗೆ ಇಲಾಖೆ ಚಿಂತನೆ: ಏನಿದು ?
ಬೆಂಗಳೂರು , ಸೋಮವಾರ, 4 ಸೆಪ್ಟಂಬರ್ 2023 (14:05 IST)
ಬೆಂಗಳೂರು : ಗ್ಯಾರಂಟಿ ಯೋಜನೆ ಮಾದರಿಯಲ್ಲಿ ಹೊಸ ಯೋಜನೆ ಜಾರಿಗೆ ಆರೋಗ್ಯ ಇಲಾಖೆ ಪ್ಲ್ಯಾನ್ ಮಾಡ್ತಿದೆ. ಗೃಹ ಆರೋಗ್ಯ ಯೋಜನೆ ಜಾರಿಗೆ ಚಿಂತನೆ ನಡೆದಿದ್ದು, ಮನೆ ಬಾಗಿಲಿಗೆ ವೈದ್ಯರನ್ನ ಕಳುಹಿಸಿ ತಪಾಸಣೆ ಮಾಡಿಸಲು ಚರ್ಚೆ ನಡೆಸಲಾಗುತ್ತಿದೆ. ಎಂಟು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಿ ಸಾಧಕ-ಬಾಧಕಗಳನ್ನ ಪರಿಶೀಲನೆಗೆ ಆರೋಗ್ಯ ಇಲಾಖೆ ಮುಂದಾಗಿದೆ.
 
ಕಾಂಗ್ರೆಸ್ ಸರ್ಕಾರ ರಚನೆ ಆದ ಮೇಲೆ ಭರವಸೆ ನೀಡಿದ್ದ ಐದರಲ್ಲಿ ನಾಲ್ಕು ಗ್ಯಾರಂಟಿಗಳನ್ನ ಜಾರಿ ಮಾಡಿದೆ. ಯುವ ನಿಧಿ ಯೋಜನೆ ಜಾರಿ ಮಾಡಬೇಕಿದೆ. ಈ ಮಧ್ಯೆ ಆರೋಗ್ಯ ಇಲಾಖೆ ಗ್ಯಾರಂಟಿ ಯೋಜನೆಗಳ ಮಾದರಿಯಲ್ಲೆ ಹೊಸ ಯೋಜನೆ ಜಾರಿಗೆ ಚಿಂತನೆ ಮಾಡ್ತಿದೆ. ಗೃಹ ಆರೋಗ್ಯ ಯೋಜನೆ ಜಾರಿಗೆ ಪ್ಲ್ಯಾನ್ ಮಾಡ್ತಿದೆ.

ಮನೆ ಮನೆಗೆ ವೈದ್ಯರನ್ನ ಕಳುಹಿಸಿ ಆರೋಗ್ಯ ತಪಾಸಣೆ ಮಾಡಿಸಲು ಮುಂದಾಗಿದೆ. ಮನೆ ಮನೆಗೆ ತೆರಳಿ ಬಿಪಿ, ಶುಗರ್, ಜ್ವರ, ಸಣ್ಣ ಪುಟ್ಟ ಖಾಯಿಲೆಗಳಿಗೆ ಟ್ರೀಟ್ ಮೆಂಟ್ ನೀಡಿಸಲು ಮುಂದಾಗಿದೆ.

ಈ ಯೋಜನೆ ಜಾರಿ ಮಾಡಲು ಪೂರ್ವ ತಯಾರಿ ನಡೆಯುತ್ತಾ ಇದ್ದು, ಕ್ಯಾಬಿನೆಟ್ ಮುಂದೆ ಪ್ರಸ್ತಾಪ ಆಗಲಿದೆಯಂತೆ. ಕ್ಯಾಬಿನೆಟ್ ನಲ್ಲಿ ಅಪ್ರೂವ್ ಆದ ಬಳಿಕ ಪ್ರಾಯೋಗಿಕವಾಗಿ ಎಂಟು ಜಿಲ್ಲೆಗಳಲ್ಲಿ ಜಾರಿ ಮಾಡಲು ಮುಂದಾಗಿದೆ. ಬೇಕಾಗುವ ಸಿಬ್ಬಂದಿಯನ್ನ ಸರ್ಕಾರಿ ಆಸ್ಪತ್ರೆಯಲ್ಲಿ ಇರುವ ವೈದ್ಯರನ್ನೇ ಬಳಸಿಕೊಳ್ಳಲಿದ್ದಾರಂತೆ. ಬೇಕಾಗುವ ಖರ್ಚು ಮತ್ತು ವೆಚ್ಚಗಳ ಬಗ್ಗೆ ಪರಿಶೀಲನೆ ನಡೆಯುತ್ತಾ ಇದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಬಹುಪತ್ನಿತ್ವ ನಿಷೇಧ : ಮಸೂದೆ ಮಂಡನೆಗೆ ಮುಂದಾದ ಅಸ್ಸಾಂ ಸರ್ಕಾರ