Webdunia - Bharat's app for daily news and videos

Install App

ಬೂಸ್ಟರ್ ಡೋಸ್ ನಡುವಿನ ಅಂತರ ಇಳಿಕೆ

Webdunia
ಗುರುವಾರ, 7 ಜುಲೈ 2022 (07:06 IST)
ನವದೆಹಲಿ: ಕೋವಿಡ್-19 ಎರಡನೇ ಲಸಿಕೆ ಹಾಗೂ ಬೂಸ್ಟರ್ ಡೋಸ್ ನಡುವಿನ ಅಂತರವನ್ನು 9 ರಿಂದ 6 ತಿಂಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಇಳಿಕೆ ಮಾಡಿದೆ.

ರಾಷ್ಟ್ರೀಯ ತಾಂತ್ರಿಕ ಸಲಹಾ ಸಮೂಹ ಸ್ಥಾಯಿ ತಾಂತ್ರಿಕ ಉಪ ಸಮಿತಿ (ಎನ್ಟಿಜಿಐ) ಕೋವಿಡ್-19 ಎರಡನೇ ಲಸಿಕೆ ಮತ್ತು ಬೂಸ್ಟರ್ ಡೋಸ್ಗಳ ನಡುವಿನ ಅಂತರವನ್ನು ಆರು ತಿಂಗಳಿಗೆ ಇಳಿಸುವಂತೆ ಕಳೆದ ತಿಂಗಳು ಶಿಫಾರಸ್ಸು ಮಾಡಿತ್ತು.

ಬಳಿಕ ಇದೀಗ ಎನ್ಟಿಜಿಐ ಶಿಫಾರಸ್ಸಿಗೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. 

ಈ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರದ ಮೂಲಕ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಬೂಸ್ಟರ್ ಡೋಸ್ ಲಸಿಕೆ ಪಡೆಯುವ ಅವದಿಯನ್ನು 9 ರಿಂದ 6 ತಿಂಗಳಿಗೆ ಇಳಿಕೆ ಮಾಡಲಾಗಿದೆ.

18-59 ವರ್ಷ ವಯಸ್ಸಿನ ಎಲ್ಲಾ ಫಲಾನುಭವಿಗಳು ಎರಡನೇ ಡೋಸ್ ಪಡೆದ ಬಳಿಕ ಬೂಸ್ಟರ್ ಡೋಸ್ ಆರು ತಿಂಗಳು ಅಥವಾ 26 ವಾರ ಕಳೆದ ನಂತರ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಪಡೆಯಲು ಅರ್ಹರು ಎಂದರು. 

ಇದೀಗ 18-59 ವರ್ಷದೊಳಗಿನವರು ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ತೆಗೆದುಕೊಳ್ಳಬಹುದಾಗಿದೆ. ಖಾಸಗಿ ಲಸಿಕಾ ಕೇಂದ್ರಗಳಲ್ಲಿ ನಿಗದಿತ ಹಣವನ್ನು ಪಾವತಿಸಿ ಲಸಿಕೆ ಪಡೆಯುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೂರನೇ ಪತ್ನಿ ಮೇಲೆ ಕಾಂಗ್ರೆಸ್ ಶಾಸಕನಿಂದ ಹಿಗ್ಗಾ ಮುಗ್ಗಾ ಹಲ್ಲೆ: video

ಅಬ್ಬಾ ಕರ್ತವ್ಯ ನಿಷ್ಠೆಯೇ.. ಕಳ್ಳನ ಹಿಡಿಯಲು ಕೊಳಚೆ ನೀರಿನ ಗುಂಡಿಗೇ ಹಾರಿದ ಶಿವಮೊಗ್ಗ ಪೊಲೀಸರು Video

ಹಸಿವಾಗ್ತಿದೆ ಹಾಲು ಕೊಡಮ್ಮಾ.. ಕರುವಿನ ಈ ಒಂದು ವಿಡಿಯೋ ಕ್ಯೂಟ್ ಮಾತ್ರವಲ್ಲ, ಕಣ್ಣಂಚು ತೇವವಾಗಿಸುತ್ತೆ Video

Karnataka Weather: ಕರ್ನಾಟಕದಲ್ಲಿ ವಾರಂತ್ಯಕ್ಕೆ ಮಳೆಯಿರಲಿದೆಯೇ, ಇಲ್ಲಿದೆ ಹವಾಮಾನ ವರದಿ

ಭಾರೀ ಮಳೆ, ದೆಹಲಿ ಇಂದಿರಾಗಾಂಧಿ ಏರ್‌ಪೋರ್ಟ್‌ ಒಳಗೂ ನುಗ್ಗಿದ ನೀರು, Video

ಮುಂದಿನ ಸುದ್ದಿ
Show comments