Publish Date: Tue, 01 May 2018 (07:27 IST)
Updated Date: Tue, 01 May 2018 (07:30 IST)
ಚಾಮರಾಜನಗರ : ಬಿಎಸ್ ಯಡಿಯುರಪ್ಪ ಸಿಎಂ ಆದರೆ 24 ಗಂಟೆಯಲ್ಲಿ ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳುಹಿಸುತ್ತೇನೆ ಎನ್ನುವ ಹೇಳಿಕೆಗೆ ಇದೀಗ ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಕಿಡಿಕಾರಿದ್ದಾರೆ.
ಗುಂಡ್ಲುಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಗೀತಾಮಹದೇವಪ್ರಸಾದ್ ಅವರ ಪರ ಪ್ರಚಾರ ಮಾಡುವ ವೇಳೆ ಮಾತನಾಡಿದ ಅವರು,’ ಸಿದ್ದರಾಮಯ್ಯ ಅವರನ್ನು 24 ಗಂಟೆಗೆ ಜೈಲಿಗೆ ಕಳುಹಿಸಲು ಯಡಿಯೂರಪ್ಪ ಅವರು ಜಡ್ಜ್ ಅಥವಾ ಪೊಲೀಸ್ ಇನ್ಸ್ ಪೆಕ್ಟರ್ ಅಥವಾ ಸಿದ್ದರಾಮಯ್ಯ ಅವರು ಕೆಳಗೆ ಹಾಕಿದ ತಕ್ಷಣ ಒಡೆಯಲು ಮಡಿಕೆ ನಾ? ಯಡಿಯೂರಪ್ಪ ಅವರು ತಮ್ಮ ಆಡಳಿತ ಅವಧಿಯನ್ನು ಒಮ್ಮೆ ನೋಡಿಕೊಳ್ಳಬೇಕು’ ಎಂದು ಪ್ರಶ್ನಿಸಿದ್ದಾರೆ.
ಹಾಗೇ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ನಮ್ಮ ಸಮೀಕ್ಷೆ ಪ್ರಕಾರ 132 ಸೀಟ್ ಗೆಲ್ಲುತ್ತೆವೆ. ಗುಂಡ್ಲುಪೇಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಸರ್ಕಾರ ಹಾಗೂ ಪಕ್ಷ ಇಲ್ಲಿಗೆ ಬಂದಿತ್ತು. ಆಗ ಉತ್ತಮ ಪ್ರತಿಕ್ರಿಯೆ ಇತ್ತು, ಈಗ ಅದಕ್ಕಿಂತಲೂ ಉತ್ತಮ ಪ್ರತಿಕ್ರಿಯೆ ಇದೆ. ಈ ಬಾರಿಯೂ ಇಲ್ಲಿ ಗೀತಾಮಹದೇವಪ್ರಸಾದ್ ಅವರು ಹೆಚ್ಚಿನ ಮತಗಳಿಂದ ಗೆಲ್ಲುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ