Select Your Language

Notifications

webdunia
webdunia
webdunia
webdunia

ಸೈಕ್ಲೋನ್ ಎಫೆಕ್ಟ್ : ರಾಜ್ಯದಲ್ಲಿ ವ್ಯಾಪಕ ಮಳೆ

ಸೈಕ್ಲೋನ್ ಎಫೆಕ್ಟ್ : ರಾಜ್ಯದಲ್ಲಿ ವ್ಯಾಪಕ ಮಳೆ
ಬೆಂಗಳೂರು , ಬುಧವಾರ, 11 ಮೇ 2022 (10:14 IST)
ಬೆಂಗಳೂರು : ಅಸನಿ ಚಂಡಮಾರುತದ ಎಫೆಕ್ಟ್ ರಾಜ್ಯದಲ್ಲಿ ವ್ಯಾಪಕ ಮಳೆ ಆಗ್ತಿದೆ. ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಮಳೆ ಮುಂದುವರಿದಿದೆ.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ರಾಮೇಶ್ವರ ಬಂಡೆ ಗ್ರಾಮದಲ್ಲಿ ಮರ ಬಿದ್ದು ಇಬ್ಬರಿಗೆ ಗಂಭೀರ ಗಾಯ. ಅಲ್ಲದೇ ಮನೆಯ ಮುಂದೆ ನಿಲ್ಲಿಸಿದ್ದ ಟ್ರಾಕ್ಟರ್ ಹಾಗೂ ಬೈಕ್ ಮೇಲೆ ಮರ ಬಿದ್ದಿದೆ. ಭತ್ತ, ಮಾವು, 14 ಎಕರೆಯ ಪಪ್ಪಾಯ ಬೆಳೆಗಳ ಸಂಪೂರ್ಣ ಹಾನಿ ಆಗಿದೆ.

ಕೊಪ್ಪಳದಲ್ಲಿ ಅರ್ಧಗಂಟೆ ಸುರಿದ ಮಳೆಗೆ ಮನೆಯ ತಗಡುಗಳು ಹಾರಿ ಹೋಗಿದೆ. ಕೊಪ್ಪಳ ತಾಲೂಕಿನ ಟನಕನಕಲ್ ಗ್ರಾಮದಲ್ಲಿ ಸುಮಾರು 40ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಆಗಿದೆ. ಸಂಸದ ಸಂಗಣ್ಣ ಕರಡಿ ಸಹೋದರನಿಗೆ ಸೇರಿದ 12 ಎಕರೆ ಪಪ್ಪಾಯಿ ತೋಟ ಸಂಪೂರ್ಣ ಹಾನಿ ಆಗಿದೆ. 

ಕೋಲಾರದಲ್ಲೂ ಮಳೆ ಆಗಿದ್ದು, ಶ್ರೀನಿವಾಸಪುರ ತಾಲೂಕಿನ ಕಂಬಾಲಪಲ್ಲಿ ಗ್ರಾಮದಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಹಸುವಿನ ಕೊಟ್ಟಿಗೆಗಗಳಿಗೆ ಹಾನಿ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಹೈಕಮಾಂಡ್‍ನಿಂದ ಬಿಗ್ ನ್ಯೂಸ್