Webdunia - Bharat's app for daily news and videos

Install App

ಕಚ್ಚಾ ತೈಲ ಬೆಲೆ ಏರಿಕೆಯ ಆತಂಕ : ನಾಗೇಶ್ವರನ್

Webdunia
ಶುಕ್ರವಾರ, 25 ಫೆಬ್ರವರಿ 2022 (07:28 IST)
ಭಾರತದ ಆರ್ಥಿಕತೆಯು ಈಗ ಚೇತರಿಕೆಗೆ ಸಿದ್ಧವಾಗಿದ್ದು, ಹೆಚ್ಚಿನ ಕಚ್ಚಾ ತೈಲ ಬೆಲೆಯು ಆತಂಕಕ್ಕೆ ಕಾರಣವಾಗಿದೆ ಎಂದಿದ್ದಾರೆ.
 
ದೇಶದಲ್ಲಿ ಬ್ಯಾಂಕಿಂಗ್ ಕ್ಷೇತ್ರವು ಸ್ಥಿರವಾಗಿದೆ, ಬಂಡವಾಳ ಲಭ್ಯವಿದೆ ಮತ್ತು ಕ್ರೆಡಿಟ್ ಆಫ್ಟೇಕ್ ಚೇತರಿಕೆಗೆ ಸಿದ್ಧವಾಗಿದೆ ಎಂದು ಭಾರತ್ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ವೆಬಿನಾರ್ನಲ್ಲಿ ಅವರು ಹೇಳಿದರು.

“ಕೊರೊನಾ ರೋಗದಿಂದಾಗಿ ಅನಿಶ್ಚಿತ ಬೆಳವಣಿಗೆ ಮತ್ತು ಹೆಚ್ಚಿನ ಹಣದುಬ್ಬರದ ವಿದ್ಯಮಾನಕ್ಕೆ ನಾವು ಹೊರತಾಗಿಲ್ಲ. ಅಭಿವೃದ್ಧಿ ಹೊಂದಿದ ದೇಶಗಳು ಸಹ ಅದೇ ಸಮಸ್ಯೆಯನ್ನು ಎದುರಿಸುತ್ತಿವೆ,” ಎಂದು ಅವರು ಹೇಳಿದ್ದಾರೆ. ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ 75 ಯುಎಸ್ಡಿ ಎಂದು ಮನಸ್ಸಿನಲ್ಲಿ ಇಟ್ಟುಕೊಂಡು 2022-23ರ ಬಜೆಟ್ ಆಗಿದೆ.

ಆದರೆ ರಷ್ಯಾ ಮತ್ತು ಉಕ್ರೇನ್ ಮಧ್ಯದ ಸಂಘರ್ಷದಿಂದಾಗಿ ಟೆಕ್ಸಾಸ್ ಕಚ್ಚಾ ತೈಲದ ಬೆಲೆ ಈಗ ಪ್ರತಿ ಬ್ಯಾರೆಲ್ಗೆ 96 ಯುಎಸ್ಡಿ ಆಗಿದೆ. “ಭಾರತದ ಆರ್ಥಿಕತೆಯ ಮೇಲೆ ಇದರ ಪ್ರಭಾವವು ಈ ಹೆಚ್ಚಿನ ಬೆಲೆ ಎಷ್ಟು ಕಾಲ ಉಳಿಯುತ್ತದೆ ಎಂಬುದನ್ನು ಅವಲಂಬಿಸಿರುತ್ತದೆ,” ಎಂದು ನಾಗೇಶ್ವರನ್ ಹೇಳಿದ್ದಾರೆ.

ನಾಗೇಶ್ವರನ್ ಅವರ ಪ್ರಕಾರ, ಹಣದುಬ್ಬರ ಮತ್ತು ಖರೀದಿಸುವ ಸಾಮರ್ಥ್ಯವು ಪ್ರಪಂಚದಾದ್ಯಂತದ ಸಮಸ್ಯೆಯಾಗಿದೆ. ಸಾಗಣೆ ವೆಚ್ಚಗಳು, ಹೆಚ್ಚಿನ ಕಂಟೇನರ್ ವೆಚ್ಚಗಳು ಮತ್ತು ಹೆಚ್ಚಿನ ತೈಲ ಬೆಲೆಗಳು ಇದಕ್ಕೆ ಕಾರಣ ಎನ್ನಲಾಗಿದೆ.

ಭಾರತದಲ್ಲಿ ಹಣದುಬ್ಬರ ದರಗಳು ಸದ್ಯಕ್ಕೆ ಶೇಕಡಾ 5.2ರ ಆಸುಪಾಸಿನಲ್ಲಿವೆ. “ಆದರೆ ಮುಂದಿನ ಹಣಕಾಸು ವರ್ಷದಲ್ಲಿ ಇದು ಆರ್ಬಿಐ ನಿಗದಿ ಮಾಡಿರುವ ಶೇಕಡಾ ನಾಲ್ಕರಿಂದ ಆರರೊಳಗೆ ಉಳಿಯಬೇಕು ಎಂಬುದಾಗಿ ನಾನು ಭಾವಿಸುತ್ತೇನೆ,” ಎಂದು ಅವರು ಹೇಳಿದ್ದಾರೆ. ಭಾರತದಲ್ಲಿ ಮಾರುಕಟ್ಟೆ ತಿದ್ದುಪಡಿ ಆರಂಭಿಸಿದೆ ಎಂದು ಸಿಇಎ ಹೇಳಿದ್ದಾರೆ.

“ಕೆಲವು ಕೈಗಾರಿಕೆಗಳಲ್ಲಿನ ಚಟುವಟಿಕೆ ಮಟ್ಟಗಳು ಕೊರೊನಾ-ಪೂರ್ವ ಮಟ್ಟವನ್ನು ದಾಟಿದೆ. ಆದರೆ ಸೇವಾ ವಲಯವು ಇನ್ನೂ ಚೇತರಿಸಿಕೊಂಡಿಲ್ಲ”. ಖಾಸಗಿ ವಲಯದ ಹೂಡಿಕೆಯ ಸನ್ನಿವೇಶಕ್ಕೆ ಸಂಬಂಧಿಸಿದಂತೆ, ಕೊರೊನಾದ ಕಾರಣದಿಂದಾಗಿ ಅದು ಇನ್ನೂ ಹೆಚ್ಚಿಲ್ಲ ಎಂದು ಅವರು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments