Select Your Language

Notifications

webdunia
webdunia
webdunia
webdunia

ಕೊರೊನಾ ಮನುಷ್ಯರಿಂದ ಪ್ರಾಣಿಗಳಿಗೆ ಹರಡುತ್ತಾ!?

ಕೊರೊನಾ ಮನುಷ್ಯರಿಂದ ಪ್ರಾಣಿಗಳಿಗೆ ಹರಡುತ್ತಾ!?
ನವದೆಹಲಿ , ಭಾನುವಾರ, 5 ಡಿಸೆಂಬರ್ 2021 (11:55 IST)
ಕೊರೊನಾ ರೂಪಾಂತರಿ ತಳಿ ಓಮಿಕ್ರಾನ್ ಒಂದೆಡೆ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ.
ಈ ನಡುವೆ ಕೊರೊನಾ ಮನುಷ್ಯರಿಂದ ಸಾಕು ಪ್ರಾಣಿಗಳಾದ ಬೆಕ್ಕು, ನಾಯಿಗಳಿಗೆ ಹರುಡುತ್ತದೆ ಎಂಬ ಸಂಶೋಧನಾ ವರದಿಯೊಂದು ಹೊರಬಿದ್ದಿದೆ.
ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ನ ಸಂಶೋಧನಾ  ವರದಿ PNAS ಪ್ರಕಾರ ಹಲವು ಮೃಗಾಲಯ ಮತ್ತು ಮನೆಯಲ್ಲಿ ಸಾಕಿದ ಪ್ರಾಣಿಗಳನ್ನು ಪರೀಕ್ಷಿಸಿದಾಗ ಮನುಷ್ಯರಿಂದ ಅವುಗಳಿಗೆ ಕೊರೊನಾ ಹರಡಿರುವ ಲಕ್ಷಣಗಳು ಕಂಡು ಬಂದಿದೆ. ಹಾಗಾಗಿ ಸಾಕು ಪ್ರಾಣಿಗಳು ಕೂಡ ಕೊರೊನಾ ಸೋಂಕಿತನ ಸಂಪರ್ಕಿತರಿಂದ ದೂರ ಇರಬೇಕೆಂದು ಎಚ್ಚರಿಕೆ ನೀಡಿದೆ. 
ಸಂಶೋಧಕರ ಪ್ರಕಾರ ಮನುಷ್ಯನಲ್ಲಿ ಕಂಡುಬಂದ ಕೊರೊನಾ ಸೋಂಕು ಮತ್ತು ಪ್ರಾಣಿಗಳಲ್ಲಿ ಕಂಡು ಬಂದ ಸೋಂಕಿಗೂ ಕೆಲ ಸಮನ್ವಯತೆ ಕಂಡುಬಂದಿದ್ದು, ಸೋಂಕಿತರ ಜಿನೋಮಿಕ್ ಸಿಕ್ವೆನ್ಸ್ ಪರೀಕ್ಷಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಈ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಾಸ್ಕ್ ಧರಿಸದಿದ್ರೆ ದಂಡ ಫಿಕ್ಸ್!