Select Your Language

Notifications

webdunia
webdunia
webdunia
webdunia

ದೇಶದಲ್ಲಿ ಕೊರೊನಾ ಭಾರೀ ಏರಿಕೆ!

ದೇಶದಲ್ಲಿ ಕೊರೊನಾ ಭಾರೀ ಏರಿಕೆ!
ನವದೆಹಲಿ , ಸೋಮವಾರ, 6 ಜೂನ್ 2022 (11:09 IST)
ನವದೆಹಲಿ : ದೇಶದಲ್ಲಿ ಗುಪ್ತಗಾಮಿನಿ ಕೊರೊನಾ ಮತ್ತೊಮ್ಮೆ ತನ್ನ ಆಟವನ್ನು ಆರಂಭಿಸಿದಂತಿದೆ.

ದಿನೇ ದಿನೇ ಕೊರೋನಾ ಸೋಂಕು ಹೆಚ್ಚಳವಾಗುತ್ತಿದೆ. 84 ದಿನಗಳ ಬಳಿಕ ದೇಶದಲ್ಲಿ 4 ಸಾವಿರಕ್ಕೂ ಹೆಚ್ಚು ಸೋಂಕು ಕಾಣಿಸಿಕೊಂಡಿದೆ

ಶುಕ್ರವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಯಲ್ಲಿ 4,041 ಕೊರೊನಾ ಪ್ರಕರಣ ದಾಖಲಾಗಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ. ಸಕ್ರಿಯ ಸೋಂಕಿತರ ಸಂಖ್ಯೆ 21,177ಕ್ಕೆ ಏರಿಕೆ ಕಂಡಿದೆ. 2,363 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಕೊರೊನಾ ಉಲ್ಬಣದಿಂದ ಎಚ್ಚೆತ್ತಿರುವ ಕೇಂದ್ರ ಸರ್ಕಾರ, ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ, ಮಹಾರಾಷ್ಟ್ರ ಸರ್ಕಾರಗಳಿಗೆ ಸೋಂಕು ನಿಯಂತ್ರಣಕ್ಕೆ ಕ್ರಮಕೈಗೊಳ್ಳುವಂತೆ ಸೂಚಿಸಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಪತಿಯೊಂದಿಗೆ ವೈಮನಸ್ಯದಿಂದ ಬೇಸತ್ತ ಟೆಕ್ಕಿ ಪತ್ನಿ ಆತ್ಮಹತ್ಯೆ