Select Your Language

Notifications

webdunia
webdunia
webdunia
webdunia

ಕೊರೊನಾ ಭೀತಿ : ಪೊಲೀಸ್ ಇಲಾಖೆಯಲ್ಲೂ ಆತಂಕ ಶುರು!

ಕೊರೊನಾ ಭೀತಿ : ಪೊಲೀಸ್ ಇಲಾಖೆಯಲ್ಲೂ ಆತಂಕ ಶುರು!
ಬೆಂಗಳೂರು , ಶನಿವಾರ, 24 ಡಿಸೆಂಬರ್ 2022 (08:53 IST)
ಬೆಂಗಳೂರು : ದೇಶದಾದ್ಯಂತ ಕೊರೊನಾ ಭೀತಿ ಆವರಿಸಿದೆ. ಇದರ ಬೆನ್ನಲ್ಲೇ ಪೊಲೀಸ್ ಇಲಾಖೆಯಲ್ಲೂ ಆತಂಕ ಶುರುವಾಗಿದೆ.
 
ಈ ನಡುವೆ ಹೊಸವರ್ಷ ಕೂಡ ಹತ್ತಿರವಾಗ್ತಿದೆ. ಹೀಗಾಗಿ ಪೊಲೀಸ್ ಇಲಾಖೆ ಹೊಸ ರೂಲ್ಸ್ ಬೇಕಾ ಬೇಡ್ವಾ ಅನ್ನೋ ಗೊಂದಲದಲ್ಲಿದೆ. ಒಂದು ಕಡೆ ಹೊಸ ವರ್ಷ ಹತ್ತಿರವಾಗುತ್ತಿದೆ. ಮತ್ತೊಂದು ಕಡೆ ಕೊರೊನಾ ಜಾಸ್ತಿ ಆಗೋ ಸೂಚನೆ ಕಾಣ್ತಿದೆ. ಇದ್ರಿಂದ ಜಾಸ್ತಿ ಜನ ಸೇರುವ ಕಡೆಗಳಲ್ಲಿ ಕಡಿವಾಣ ಹಾಕೋಕೆ ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ.

ಹೊಸವರ್ಷದಂದು ಲಕ್ಷಾಂತರ ಜನ ಒಂದೇ ಕಡೆ ಸೇರುವುದರಿಂದ ಕೊರೊನಾ ಸೋಂಕು ಹೆಚ್ಚಾಗುವ ಆತಂಕ ಶುರುವಾಗಿದೆ. ಪಬ್, ಕ್ಲಬ್ ಸೇರಿದಂತೆ ರೆಸ್ಟೋರೆಂಟ್ಗಳಿಗೆ ಜಾಸ್ತಿ ಜನ ಸೇರದಂತೆ ಮಾಲೀಕರಿಗೆ ಈಗಾಗಲೇ ಪೊಲೀಸ್ ಇಲಾಖೆ, ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಅನ್ನೋದನ್ನು ಸೂಚಿಸಿದೆ.

ಆ ನಿಟ್ಟಿನಲ್ಲಿ ಈಗಾಗಲೇ ಎರಡು ಸುತ್ತಿನ ಸಭೆ ಕೂಡ ನಡೆಸಿದ್ದು, ಕೊರೊನಾ ಭೀತಿಯಲ್ಲಿ ಕೆಲ ರೂಲ್ಸ್ ಜಾರಿಯಾದರೆ ಒಳ್ಳೆಯದು ಅನ್ನೋ ನಿರ್ಧಾರವನ್ನು ವ್ಯಕ್ತಪಡಿಸಿದೆ. 


Share this Story:

Follow Webdunia kannada

ಮುಂದಿನ ಸುದ್ದಿ

ಮಸೀದಿ, ದೇವಸ್ಥಾನ ಕೆಡವೋದು ನೋವಿನ ಸಂಗತಿ : ಸಿಎಂ