Publish Date: Tue, 22 Aug 2023 (09:36 IST)
Updated Date: Tue, 22 Aug 2023 (10:14 IST)
ಶಿಕ್ಷಣ ಇಲಾಖೆ ಸಮಸ್ಯೆ ಬಗ್ಗೆ ಚರ್ಚೆ ಆಗಿದೆ. ಎನ್ಇಪಿ ಸಾಧಕ-ಬಾಧಕದ ಬಗ್ಗೆ ಚರ್ಚೆ ಆಗಿದೆ. ನಮ್ಮ ಶಿಕ್ಷಣ ರಾಷ್ಟ್ರದಲ್ಲಿ ಉತ್ತಮವಾಗಿದೆ. ಅನೇಕ ಸಮಸ್ಯೆಗಳನ್ನ ಕುಲಪತಿಗಳು ಹೇಳಿದ್ದಾರೆ. ಕೇಂದ್ರದಿಂದ ಶಿಕ್ಷಣ ಇಲಾಖೆಗೆ ನಮಗೆ ಕಡಿಮೆ ಹಣ ಬರುತ್ತಿದೆ ಎಂದು ತಿಳಿಸಿದರು.
ನಮ್ಮ ಶಿಕ್ಷಣ ಗುಣಮಟ್ಟ ಹೆಚ್ಚಳಕ್ಕೆ ಸರ್ಕಾರ ಬದ್ಧವಾಗಿದೆ. ಎನ್ಇಪಿಯನ್ನ ತರಾತುರಿಯಲ್ಲಿ ಕರ್ನಾಟಕದಲ್ಲಿ ಜಾರಿ ಮಾಡಲಾಯ್ತು. ಯುಪಿ, ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ಬಜೆಪಿ ಆಡಳಿತ ರಾಜ್ಯದಲ್ಲಿ ಎನ್ಇಪಿ ಇಲ್ಲ. ಪ್ರಾಥಮಿಕ ಶಿಕ್ಷಣದಿಂದ ಪ್ರಾರಂಭ ಮಾಡಬೇಕಿತ್ತು. ಆದರೆ ಆತುರವಾಗಿ ಜಾರಿ ಮಾಡಿದ್ದಾರೆ.
ಹಿಂದೆ ಸಿದ್ದರಾಮಯ್ಯ ಅವರು ಕಾಲದಲ್ಲಿ ಇದ್ದ ಎಜುಕೇಷನ್ ಪಾಲಿಸಿ ಒಂದು ಇದೆ. ತಜ್ಞರ ಒಳಗೊಂಡು ಮಾಡಿದ ಒಂದು ರಿಪೋರ್ಟ್ ಇದೆ. ಎನ್ಇಪಿಯಲ್ಲಿ ನಮಗೆ ಅನೇಕ ವಿಚಾರದಲ್ಲಿ ಒಪ್ಪಿಗೆ ಇಲ್ಲ. ತಂತ್ರಜ್ಞಾನಕ್ಕೆ ತಕ್ಕಂತೆ ಎಜುಕೇಷನ್ ಇರಬೇಕು. ಇದಕ್ಕೆ ತಕ್ಕಂತೆ ಪಾಲಿಸಿ ರೂಪಿಸುತ್ತೇವೆ ಎಂದರು.
ನಮ್ಮ ರಾಜ್ಯದಲ್ಲಿ ಎನ್ಇಪಿ ರದ್ದು ಮಾಡುತ್ತಿದ್ದೇವೆ. ಹೊಸ ಪಾಲಿಸಿ ರಚನೆಗೆ ಸಮಿತಿ ರಚನೆ ಮಾಡಲಾಗಿದೆ. ಎನ್ಇಪಿ ಇಲ್ಲ. ನಾಗಪುರ ಯೂನಿವರ್ಸಿಟಿ ಪಾಲಿಸಿ ಇರೋದಿಲ್ಲ. ಒಂದು ವಾರದಲ್ಲಿ ಸಮಿತಿ ರಚನೆ ಮಾಡ್ತೀವಿ. ಆದಷ್ಟು ಬೇಗ ಸಮಿತಿ ವರದಿ ತೆಗೆದುಕೊಂಡು ಹೊಸ ಶಿಕ್ಷಣ ನೀತಿ ಜಾರಿ ಮಾಡ್ತೀವಿ. ಎಸ್ಇಪಿ ಜಾರಿ ಮಾಡ್ತೀವಿ ಎಂದು ಸ್ಪಷ್ಟಪಡಿಸಿದರು.