ಎರಡು ದಿನದ ಹೆಲಿಕಾಪ್ಟರ್ ಪ್ರಯಾಣಕ್ಕೆ 13 ಲಕ್ಷ ಬಿಲ್ ಆರೋಪಕ್ಕೆ ಬಿಎಸ್ ವೈ ತಿರುಗೇಟು

Webdunia
ಬುಧವಾರ, 6 ಜೂನ್ 2018 (09:18 IST)
ಬೆಂಗಳೂರು: ಎರಡು ದಿನ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾಗ ಹೆಲಿಕಾಪ್ಟರ್ ಪ್ರಯಾಣಕ್ಕೆ 13 ಲಕ್ಷ ರೂ. ಖರ್ಚು ಮಾಡಿದ್ದರು ಎಂಬ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಮಾಜಿ ಸಿಎಂ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

ನಾವು ವೆಚ್ಚ ಕಡಿವಾಣಕ್ಕೆ ಪ್ರಯತ್ನಿಸುತ್ತಿದ್ದೇವೆ. ವಿಶೇಷ ವಿಮಾನದಲ್ಲಿ ಪ್ರಯಾಣಿಸಲ್ಲ. ಆದರೆ ಹಿಂದಿದ್ದ ಮುಖ್ಯಮಂತ್ರಿಗಳು ತಮ್ಮ ಎರಡು ದಿನದ ಪ್ರಯಾಣಕ್ಕೆ 13 ಲಕ್ಷ ಬಿಲ್ ಹಾಕಿದ್ದರು.ಇದಕ್ಕೆ ಯಾರು ಹೊಣೆ ಎಂದು ಸಿಎಂ ಕುಮಾರಸ್ವಾಮಿ ಕಿಡಿ ಕಾರಿದ್ದರು.

ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಈ ಬಗ್ಗೆ ಮುಖ್ಯ ಕಾರ್ಯದರ್ಶಿಯವರನ್ನೇ ಕೇಳಿ. ನಾನು ರಾಜ್ಯಪಾಲರ ಮನವಿ ಮೇರೆಗೆ ಎರಡು ದಿನ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದೆ. ಈ ಸಂದರ್ಭದಲ್ಲಿ ಮಹಾಂತ ಶಿವಯೋಗಿ ಸ್ವಾಮೀಜಿ ಲಿಂಗೈಕ್ಯ ಕಾರ್ಯಕ್ರಮ ಮತ್ತು ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಹೋಗಿ ಬಂದಿದ್ದಕ್ಕೆ 13 ಲಕ್ಷ ಬಿಲ್ ಬಂದಿದೆ.

ನಾನು ಹೆಲಿಕಾಪ್ಟರ್ ಬಾಡಿಗೆಯಲ್ಲಿ ಕಮಿಷನ್‍ ಪಡೆದಿದ್ದೇನೆ ಎನ್ನುವಂತೆ ಮಾತನಾಡುವುದನ್ನು ಕುಮಾರಸ್ವಾಮಿ ಬಿಡಲಿ. ಅಪ್ಪ ಮಕ್ಕಳು ಸತ್ಯ ಹರಿಶ್ಚಂದ್ರರಂತೆ ಆಡುವುದನ್ನು ಬಿಡಲಿ. ಈ ಪ್ರಯಾಣದ ವೆಚ್ಚವನ್ನು ಸ್ವಂತ ಜೇಬಿನಿಂದ ಪಾವತಿಸಲು ಸಿದ್ಧನಿದ್ದೇನೆ. ಈ ಬಗ್ಗೆ ವೃಥಾ ಗೊಂದಲದ ಹೇಳಿಕೆ ನೀಡುವುದು  ಬೇಡ ಎಂದು ಯಡಿಯೂರಪ್ಪ ಖಡಕ್ ಆಗಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಲ್ಲಿಕಾರ್ಜುನ ಖರ್ಗೆಗಿಂತ ಮೊದಲು ಪ್ರಿಯಾಂಕ್ ಭೇಟಿಯಾದ ರಾಹುಲ್ ಗಾಂಧಿ: ಮಹತ್ವದ ಬೆಳವಣಿಗೆ

ಡಿಕೆಶಿ, ಸಿದ್ದು ಕುರ್ಚಿ ಸಮರದಲ್ಲಿ ಹೈಕಮಾಂಡ್ ಗೆ ಕಾಡುತ್ತಿದೆಯಾ ಹಿಂದಿನ ಆ ವಿಚಾರ

ಅಯೋಧ್ಯೆ ರಾಮಮಂದಿರದ ಮುಡಿಗೆ ಭಗವಾಧ್ವಜವೇರಿದ ಆ ಕ್ಷಣ ಹೇಗಿತ್ತು: ವಿಡಿಯೋ ನೋಡಿ

ಬಿಜೆಪಿ ವತಿಯಿಂದ ಸಂವಿಧಾನ ಮತ್ತು ಅಂಬೇಡ್ಕರ್ ಗಾಗಿ ವಿಶೇಷ ಕಾರ್ಯಕ್ರಮ

Video: ಮದುವೆ ಸಂಭ್ರಮಾಚರಣೆ ವೇಳೆ ಹೈಡ್ರೋಜನ್ ಬಲೂನ್ ಸ್ಪೋಟ: ವಧು ವರರ ಕತೆ ಏನಾಯ್ತು

ಮುಂದಿನ ಸುದ್ದಿ
Show comments