Publish Date: Sun, 19 Sep 2021 (13:13 IST)
Updated Date: Sun, 19 Sep 2021 (13:16 IST)
ದಾವಣಗೆರೆ : ಜಿಲ್ಲೆಯಲ್ಲಿ ಇಂದು ಮಹತ್ವದ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಈ ಸಭೆಗೂ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದಂತ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬಿಜೆಪಿ ಪಕ್ಷದ ನಾಯಕರನ್ನು ಸಂಪರ್ಕಿದ್ದಾಗಿ ಸ್ಪೋಟಕ ಬಾಂಬ್ ಸಿಡಿಸಿದ್ದಾರೆ.
ಈ ಕುರಿತಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಕಾಂಗ್ರೆಸ್ ಗೆ ಬಿಜೆಪಿ ನಾಯಕರು ಹೋಗೋ ಮಾತೇ ಇಲ್ಲ. ಕಾಂಗ್ರೆಸ್ ನವರೆ ಬಿಜೆಪಿಗೆ ಬರೋದಕ್ಕೆ ರೆಡಿಯಾಗಿದ್ದಾರೆ ಎಂದರು.
ಇನ್ನೂ ಮುಂದುವರೆದು ಮಾತನಾಡಿದಂತ ಅವರು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ನಮ್ಮ ಬಿಜೆಪಿಯ ಕೆಲ ನಾಯಕರನ್ನು ಕಾಂಗ್ರೆಸ್ ಗೆ ಬರುವಂತೆ ಸಂಪರ್ಕಿಸುತ್ತಿದ್ದಾರೆ. ಇದು ನನ್ನ ಗಮನಕ್ಕೂ ಬಂದಿದೆ. ಆದ್ರೇ.. ನಮ್ಮವರು ಯಾರು ಅದಕ್ಕೆ ಒಪ್ಪಿಲ್ಲ. ಈಗ ಕಾಂಗ್ರೆಸ್ ನವರೆ ಬಿಜೆಪಿಗೆ ಬರ್ತಾ ಇದ್ದಾರೆ ಎಂಬ ಸ್ಪೋಟಕ ಮಾಹಿತಿ ಬಹಿರಂಗ ಪಡಿಸಿದರು.