Publish Date: Tue, 25 Sep 2018 (08:38 IST)
Updated Date: Tue, 25 Sep 2018 (08:40 IST)
ಬೆಂಗಳೂರು: ವ್ಯಾಟ್ಸಪ್ ಕರೆಗಳ ಮೂಲಕ ಈಗಲೂ ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್ ಆರೋಪಿಸಿದೆ.
ಫೋನ್ ಕರೆಗಳು ರೆಕಾರ್ಡ್ ಆಗದಂತೇ ತಡೆಯಲು ಬಿಜೆಪಿ ನಾಯಕರು ವ್ಯಾಟ್ಸಪ್ ಕರೆ ಮಾಡುತ್ತಿದ್ದಾರೆ. ಆ ಮೂಲಕ ತಾವು ಸಂಪರ್ಕಿಸುವುದಕ್ಕೆ ಯಾವುದೇ ಪುರಾವೆ ಸಿಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಸ್ವತಃ ಯಡಿಯೂರಪ್ಪನವರೇ ಕೆಲವು ಕಾಂಗ್ರೆಸ್ ಶಾಸಕರ ಜತೆ ವ್ಯಾಟ್ಸಪ್ ಕರೆ ಮೂಲಕ ಮಾತನಾಡಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ. ಆದರೆ ಇದೆಲ್ಲಾ ಶುದ್ಧ ಸುಳ್ಳು ಎಂದು ಯಡಿಯೂರಪ್ಪ ತಳ್ಳಿ ಹಾಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.