Webdunia - Bharat's app for daily news and videos

Install App

ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ಮುಖಂಡ ಜಗ್ಗೇಶ್

Webdunia
ಬುಧವಾರ, 23 ಮೇ 2018 (14:22 IST)
ಬೆಂಗಳೂರು : ನಿಮಗೆಲ್ಲರಿಗೂ ಕೂಡ ಅದೇ ರೀತಿಯ ಮುಖಭಂಗ ಇನ್ನೂ ಮೂರು ತಿಂಗಳಲ್ಲಿ ಆಗಿಲ್ಲವೆಂದಲ್ಲಿ ಬೃಂದಾವನದಲ್ಲಿ ರಾಯರಿಲ್ಲ ಎಂದುಕೊಳ್ಳುತ್ತೇನೆ ಎಂದು ಬಿಜೆಪಿ ಮುಖಂಡ ಜಗ್ಗೇಶ್ ಅವರು ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ಅಪಮಿತ್ರ ಮೈತ್ರಿಯನ್ನು ವಿರೋಧಿಸಿ ನಗರದಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಮಾತನಾಡಿದ ಜಗ್ಗೇಶ್ ಅವರು,’ ಭಾರತೀಯ ಜನತಾ ಪಾರ್ಟಿ ಕಪ್ಪು ಪಟ್ಟಿ ಧರಿಸಿ ಕರಾಳ ದಿನವನ್ನು ಆಚರಿಸುತ್ತಿದೆ. ಮತವನ್ನು ನೀಡಿ ಭಾರತೀಯ ಜನತಾ ಪಕ್ಷವನ್ನು ಏಕಪಕ್ಷೀಯವಾಗಿ ಹೊರತಂದಿದ್ದೀರಿ. ಆದ್ರೆ ವಾಮಮಾರ್ಗದಿಂದ ನಮ್ಮನ್ನು ಪಕ್ಕಕಿಡಬೇಕು ಎನ್ನುವ ಷಡ್ಯಂತ್ರ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರ ಬೆವರಿನ ಹನಿಗೆ ಬೆಲೆ ಕೊಡುವ ಈ ಮೈತ್ರಿ ಸರ್ಕಾರಕ್ಕೆ ಧಿಕ್ಕಾರ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.


‘ಮೋದಿಯೆಂಬ ಈ ರಾಜ್ಯದ ಸಿಂಹವನ್ನು ಅಡ್ಡಗಟ್ಟಲು ನಾಯಿ, ನರಿ, ಜಿಗಣೆಗಳೆಲ್ಲ ಒಟ್ಟಿಗೆ ಸೇರಿರುವ ಕಾರ್ಯಕ್ರಮಗಳನ್ನು ನಾವು ನೀವು ನೋಡ್ತಾ ಇದ್ದೀವಿ. ನಿರೋದ್ಯೋಗಿ ಸಂಸ್ಥೆಗಳು ಮೋದಿಯವರ ಹೊಡೆತಗಳನ್ನು ತಾಳಲಾರದೆ ಮೂಲೆಗುಂಪಾದಂತಹ ಎಲ್ಲರೂ ಇವತ್ತು ಒಂದು ವೇದಿಕೆಯಲ್ಲಿ ಸೇರಿ ಮೋದಿಯನ್ನು ಮಣಿಸಲು ನಾವಿದ್ದೇವೆ ಎಂಬ ಭ್ರಮೆ ಹಾಗೂ ಚಿಂತನೆಯಿಂದ ಬಂದು ನಿಂತಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments