Webdunia - Bharat's app for daily news and videos

Install App

ಬಿಜೆಪಿ ಅಧಿಕಾರಕ್ಕೆ ಬರೋದು ಸಾಧ್ಯವಿಲ್ಲ: ತೋಂಟದಾರ್ಯ ಶ್ರೀ

Webdunia
ಶುಕ್ರವಾರ, 6 ಏಪ್ರಿಲ್ 2018 (18:34 IST)
ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ ಈಗ ತಾರಕಕ್ಕೆ ಏರಿದ್ದು, ಸ್ವಾಮೀಜಿಯೊಬ್ಬರು ಇದಕ್ಕೆ ಬೆಂಬಲ ನೀಡದ ಇತರೆ ಸ್ವಾಮಿಗಳ ವಿರುದ್ಧ ಕೀಳು ಮಟ್ಟದ ಭಾಷೆ ಬಳಸಿ ಜರಿದಿದ್ದಾರೆ.
ಕಳೆದ ರಾತ್ರಿ ಗದಗನ ನಗರದ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವ ಮಂಗಲೋತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡುತ್ತಿದ್ದ ತೋಂಟದಾರ್ಯ ಮಠದ ಡಾ. ಸಿದ್ಧಲಿಂಗ ಸ್ವಾಮೀಜಿ, ಲಿಂಗಾಯತ ಧರ್ಮ ಪ್ರತ್ಯೇಕತೆ ವಿರೋಧಕ್ಕೆ ಅನ್ಯ ಸ್ವಾಮೀಜಿಗಳು, ಜೋಗಪ್ಪ, ಜೋಗವ್ವ ಇದ್ದಂತೆ… ಗಂಡು ಅಲ್ಲಾ ಹೆಣ್ಣು ಅಲ್ಲಾ ಔಟ್ ಆಗಿದ್ದಾರೆ. 
 
ಹಾಗೇ ಬಸವಣ್ಣನವರ ತತ್ವ ಪಾಲಿಸದವರು ಕೂಡ ಜೋಗಪ್ಪನಂತೆ ಔಟ್ ಆಗಿದ್ದಾರೆ. ಅಂತಾ ಭಾಷಾ ಪ್ರಹಾರ ನಡೆಸಿದ್ದಾರೆ. ಒಮ್ಮೆ ನೋಡಿದರೆ, ಸಿಎಂ ಸಿದ್ದರಾಮಯ್ಯನ ವಿರುದ್ಧ ಪ್ರಚಾರ ಮಾಡುತ್ತೀವಿ ಅಂತಾರೆ, ಇನ್ನೊಮ್ಮೆ ನಾವು ಚುನಾವಣೆಯ ಪ್ರಚಾರ ಮಾಡುವುದಿಲ್ಲಾ ನಮ್ಗೆ ಎಲ್ಲಾ ಪಕ್ಷದವರು ಬೇಕು ಅಂತಾರೆ ಈ ಮೂಲಕ ಮತ್ತೆ ಬಹುಬೇಗ ಪ್ಲೇಟ್​​ಚೆಂಜ್ ಮಾಡ್ತಾರೆ. ಇವರು ಮಾತಿಗೆ ತಳ ಬುಡ ಏನೂ ಇಲ್ಲ. ಇಂತವರು ಯಲ್ಲಮ್ಮನ ಗುಡ್ಡದಲ್ಲಿ ಜೋಗಪ್ಪಗಳು ಔಟ್ ಆದಂತೆ ಅಂತಾ ವ್ಯಂಗ್ಯವಾಡಿದ್ದಾರೆ.
 
ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ’
 
ಇತ್ತೀಚೆಗೆ ಬಾಗಲಕೋಟೆಯ ಶಿವಯೋಗಿ ಮಂದಿರದಲ್ಲಿ ಸ್ವಾಮೀಜಿಗಳೊಂದಿಗೆ ಮಾತುಕತೆ ನಡೆಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವೀರಶೈವ ಮತ್ತು ಲಿಂಗಾಯತವನ್ನ ಬೇರ್ಪಡಿಸುವುದಿಲ್ಲ ಎಂದಿದ್ರು. ಶಾ ಅವರ ಈ ಹೇಳಿಕೆ ವಿರುದ್ಧ ಕಿಡಿಕಾರಿದ ಡಾ. ಸಿದ್ಧಲಿಂಗ ಸ್ವಾಮೀಜಿ, ವೀರಶೈವ ಮತ್ತು ಲಿಂಗಾಯತವನ್ನ ಪ್ರತ್ಯೇಕಿಸುವುದಿಲ್ಲ ಅಂದ್ರೆ, ಬಿಜೆಪಿ ಎಲ್ಲೂ ಅಧಿಕಾರಕ್ಕೆ ಬರುವುದಿಲ್ಲ ಅಂತಾ ರಾಜ್ಯ ರಾಜಕಾರಣದ ಭವಿಷ್ಯ ನುಡಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್ ಗಾಂಧಿಯಿಂದ ಮತಗಳ್ಳತನ ಆರೋಪ: ಕಾಂಗ್ರೆಸ್ ಪ್ರತಿಭಟನೆಗೆ ಪ್ರತಿತಂತ್ರ ಹೂಡಿದ ಬಿಜೆಪಿ

ಮೊಸಳೆಕಣ್ಣೀರು ಹಾಕುತ್ತಿರುವ ರಾಹುಲ್ ಗಾಂಧಿ, ರೈತರು ಆತ್ಮಹತ್ಯೆ ಮಾಡಿಕೊಂಡಾಗ ಎಲ್ಲಿ ಇದ್ರೂ: ಪಿ.ಸಿ.ಮೋಹನ್

ಮುಂಬೈ, ಕೋಲ್ಕತ್ತಾ ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ: ಇಂಡಿಗೋ ಮುಂದಿನ ಕ್ರಮಕ್ಕೆ ಮೆಚ್ಚುಗೆ

6 ತಿಂಗಳಿನಿಂದ ಅಪ್ಪ, ಅಮ್ಮನ ಭೇಟಿಯಾಗಿಲ್ಲ, ಶಿಕ್ಷೆ ಕಡಿಮೆಗಾಗಿ ಜಡ್ಜ್‌ ಮುಂದೆ ಪ್ರಜ್ವಲ್ ಕಣ್ಣೀರು

ಪ್ರತಿಭಟನೆ ಮಾಡಲಿರುವ ರಾಹುಲ್ ಗಾಂಧಿ ವಿರುದ್ಧವೇ ಬಿಜೆಪಿ ಪ್ರತಿಭಟನೆ

ಮುಂದಿನ ಸುದ್ದಿ
Show comments