ನವದೆಹಲಿ : ಯಾವುದೇ ಹುಡುಗಿ ಅಥವಾ ಮಹಿಳೆಯನ್ನ 14 ಸೆಕೆಂಡ್ಗಿಂತ ಹೆಚ್ಚು ಕಾಲ ಗುರಾಯಿಸಿದ್ರೆ, ಅಶ್ಲೀಲ ಸನ್ನೆ ಮಾಡಿದ್ರೆ,
ಹಾಡು ಅಥವಾ ಕವಿತೆ ಹೇಳಿದ್ರೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಬಂಧಿಸಬಹುದಾಗಿದೆ ಎಂದು ನ್ಯಾಷನಲ್ ಕ್ರೈಂ ಇನ್ವೆಷ್ಟಿಗೇಶನ್ ಬ್ಯೂರೋ ಹೆಸರಿನ ಸರ್ಕಾರೇತರ ಸಂಸ್ಥೆಯೊಂದು ತಿಳಿಸಿದೆ.
ನ್ಯಾಷನಲ್ ಕ್ರೈಂ ಇನ್ವೆಷ್ಟಿಗೇಶನ್ ಬ್ಯೂರೋ ಹೆಸರಿನ ಎನ್ಜಿಒ ಸಂಸ್ಥೆ ಈ ಕುರಿತು ಟ್ವೀಟ್ ಮಾಡಿದ್ದು, ಯಾವುದೇ ಹುಡುಗಿ ಅಥವಾ ಮಹಿಳೆಯನ್ನ 14 ಸೆಕೆಂಡ್ಗಿಂತಲೂ ಹೆಚ್ಚುಕಾಲ ಗುರಾಯಿಸುವುದು,
ಅಶ್ಲೀಲ ಸನ್ನೆ ಮಾಡಿದ್ರೆ, ಹಾಡು ಅಥವಾ ಕವಿತೆ ಹೇಳುವುದು ಭಾರತೀಯ ದಂಡ ಸಂಹಿತೆ ಸೆಕ್ಷನ್ 294 (A) ಮತ್ತು (B) ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಪಠ್ಯ ಸಂದೇಶ ಕಳುಹಿಸುವ ಅಪರಾಧಕ್ಕೆ ಗರಿಷ್ಠ 3 ತಿಂಗಳ ಶಿಕ್ಷೆ ವಿಧಿಸಬಹುದಾಗಿದೆ. ಆದ್ದರಿಂದ ಈ ಸೆಕ್ಷನ್ಗಳ ಅಡಿಯಲ್ಲಿ ಕೇಸ್ ದಾಖಲಿಸಬಹುದು ಎಂದು ತಿಳಿಸಿದೆ.