Publish Date: Sun, 04 Dec 2022 (08:21 IST)
Updated Date: Sun, 04 Dec 2022 (10:07 IST)
ಸೋಫಿಯಾ : 2023ರ ಅವಧಿಯಲ್ಲಿ ಅನ್ಯಗ್ರಹ ಜೀವಿಗಳ ದಾಳಿ, ಸೋಲರ್ ಸುನಾಮಿಯಂತಹ ಅನೇಕ ಗಂಡಾ ತರಗಳಿಂದ ವಿಶ್ವ ನಾನಾ ರೀತಿಯ ತೊಂದರೆಗಳನ್ನು ಎದುರಿಸಲಿದೆ.
ನಾಸ್ಟ್ರಾಡಾಮಸ್ ಮಹಿಳೆ ಎಂದೇ ಹೆಸರಾಗಿರುವ ಬಾಬಾ ವಂಗಾ ಭವಿಷ್ಯವಾಣಿ ನುಡಿದಿದ್ದಾರೆ. ವಿಶ್ವದ ಅಂತ್ಯದ ಬಗ್ಗೆಯೂ ಇದೇ ವೇಳೆ ಸುಳಿವು ಕೊಟ್ಟಿದ್ದಾರೆ.
ಕೆಲ ತಿಂಗಳ ಹಿಂದೆಯಷ್ಟೇ ಭಾರತದ ಭವಿಷ್ಯ ನುಡಿದು ಆತಂಕ ಸೃಷ್ಟಿಸಿದ್ದ ಬಲ್ಗೇರಿಯಾದ ಕುರುಡು ಮಹಿಳೆ ಬಾಬಾ ವಂಗಾ, ಇದೀಗ ವಿಶ್ವದ ಭವಿಷ್ಯ ನುಡಿದು ಮತ್ತೊಮ್ಮೆ ಆತಂಕ ಉಂಟಾಗುವಂತೆ ಮಾಡಿದ್ದಾರೆ.
2023ರಲ್ಲಿ ಸೋಲಾರ್ ಸುನಾಮಿ ಸಂಭವಿಸುತ್ತದೆ. ಇದರ ಪರಿಣಾಮವಾಗಿ ಭೂಮಿಯ ಕಾಂತೀಯ ಕವಚವು ನಾಶವಾಗುತ್ತದೆ. ಭೂಮಿಯ ಮೇಲೆ ಏಲಿಯನ್ಗಳ (ಅನ್ಯಗ್ರಹ ಜೀವಿ) ದಾಳಿಯಿಂದ ಲಕ್ಷಾಂತರ ನಿವಾಸಿಗಳು ಸಾಯುತ್ತಾರೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.