ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಮೇಲೆ ದಂಡ ಕಟ್ಟಿಸಿಕೊಳ್ಳುವ ಪೊಲೀಸರು ಹಾಗೂ ಸವಾರರ ನಡುವೆ ವಾಗ್ಯುದ್ದಗಳೇ ನಡೆದು ಹೋಗಿವೆ. ಸಂಚಾರಿ ನಿಯಮ ಉಲ್ಲಂಘನೆ ಮಾಡಿದರು ನನ್ನ ಬಳಿ ದುಡ್ಡಿಲ್ಲ ಎಂದು ಸಬೂಬು ಹೇಳಿ ತಪ್ಪಿಸಿಕೊಳ್ಳಲು ಆಗುವುದೇ ಇಲ್ಲ.
ಬೆಂಗಳೂರು ನಗರ ಸಂಚಾರಿ ಪೊಲೀಸ್ ವಿಭಾಗ ಈಗ ಸ್ಮಾರ್ಟ್ ಆಗುವತ್ತ ಹೆಜ್ಜೆ ಇಟ್ಟಿದೆ. ಸಂಚಾರ ನಿಯಮ ಉಲ್ಲಂಘನೆಗಳ ದಂಡ ಪಾವತಿಗೆ ಎಂದು ಪೇಟಿಎಂ ಮೂಲಕ ಅವಕಾಶ ಕಲ್ಪಿಸಲಾಗಿದೆ.ಸೋಮವಾರ (ಜುಲೈ 5) ಬೆಳಿಗ್ಗೆ ಕಮಿಷನರ್ ಕಮಲ್ ಪಂತ್ ಅವರು ಈ ಸೌಲಭ್ಯವನ್ನು ಉದ್ಘಾಟನೆ ಮಾಡಿದರು. ಇದುವರೆಗು ಡಿಜಿಟಲ್ ವೇದಿಕೆಯ ಮೂಲಕ ದಂಡ ಪಾವತಿಸಲು ಅವಕಾಶ ಇರಲಿಲ್ಲ. ಈಗ ಪೇಟಿಎಂ ಸೌಲಭ್ಯ ಈ ಕೊರತೆ ನೀಗಿಸಿದೆ. ಈ ಮೊದಲು ಇ-ಅhಚಿಟಟಚಿಟಿ - ಆigiಣಚಿಟ ಖಿಡಿಚಿಜಿಜಿiಛಿ/ಖಿಡಿಚಿಟಿsಠಿoಡಿಣ ಇಟಿಜಿoಡಿಛಿemeಟಿಣ Soಟuಣioಟಿ ವೆಬ್ಸೈಟ್ಗೆ ಭೇಟಿ ನೀಡಿ ನಂತರ ಗೆಟ್ ಚಲನ್ ಡೀಟೈಲ್ಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಚಲನ್ ನಂಬರ್, ವೆಹಿಕಲ್ ನಂಬರ್, ಡಿಎಲ್ ನಂಬರ್ ನಮೂದಿಸಿದ ನಂತರ ಪರಿಶೀಲಿಸಿ ಆನ್ಲೈನ್ನಲ್ಲಿ ಪಾವತಿ ಆಯ್ಕೆಯನ್ನು ಕ್ಲಿಕ್ ಮಾಡಿ ಓಟಿಪಿ ನಮೂದಿಸಿ ಇ-ಚಲನ್ ಮೂಲಕ ಪಾವತಿ ಮಾಡುವ ಅವಕಾಶವಿತ್ತು.