Publish Date: Fri, 25 Nov 2022 (11:37 IST)
Updated Date: Fri, 25 Nov 2022 (11:39 IST)
ಮುಂಬೈ : ವಿಶ್ವದ ಹಲವು ರಾಷ್ಟ್ರಗಳು ಆರ್ಥಿಕ ಹಿಂಜರಿತದ ಭೀತಿ ಎದುರಿಸುತ್ತಿದ್ದರೆ ಭಾರತದ ಬಾಂಬೆ ಷೇರು ಮಾರುಕಟ್ಟೆ ಸಂವೇದಿ ಸೂಚಂಕ್ಯ ಸೆನ್ಸೆಕ್ಸ್ ಸಾರ್ವಕಾಲಿಕ ಎತ್ತರಕ್ಕೆ ಜಿಗಿದು ದಾಖಲೆ ಬರೆದಿದೆ.
ಗುರುವಾರ ಒಂದೇ ದಿನ 762.0 ಅಂಕ ಏರಿಕೆಯಾಗಿದೆ. ಬುಧವಾರ 61,510.58 ರಲ್ಲಿ ಕೊನೆಯಾಗಿದ್ದರೆ ಇಂದು 62,272.68ರಲ್ಲಿ ವಹಿವಾಟು ಕೊನೆಗೊಳಿಸಿತು. ಈ ಹಿಂದೆ 2021ರ ಅಕ್ಟೋಬರ್ 19ಕ್ಕೆ 62,245ಕ್ಕೆ ಏರಿದ್ದೇ ಇದುವರೆಗಿನ ದಾಖಲೆಯಾಗಿತ್ತು.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚಂಕ್ಯ ನಿಫ್ಟಿ 216 ಅಂಕ ಏರಿಕೆ ಕಂಡಿದೆ. ಬುಧವಾರ 18,267.25 ರಲ್ಲಿ ಕೊನೆಗೊಂಡಿದ್ದರೆ ಇಂದು 18,484.10 ರಲ್ಲಿ ವಹಿವಾಟು ಮುಗಿಸಿದೆ.