Publish Date: Wed, 27 Apr 2022 (12:26 IST)
Updated Date: Wed, 27 Apr 2022 (18:27 IST)
ಬೆಂಗಳೂರು : ಕೊರೊನಾ 4ನೇ ಅಲೆ ನಿಯಂತ್ರಣಕ್ಕೆ ಮತ್ತೆ ಟಿ3 ಸೂತ್ರಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮೊರೆ ಹೋಗಿದ್ದಾರೆ.
ಕೊರೊನಾ ನಿಯಂತ್ರಣ ಸಂಬಂಧ ಎಲ್ಲಾ ರಾಜ್ಯಗಳ ಜೊತೆ ನಡೆದ ಸಭೆಯಲ್ಲಿ ಎಲ್ಲಾ ರಾಜ್ಯಗಳು 3ಟಿ ಸೂತ್ರ ಅಳವಡಿಸಿ ಅಂತ ಸಲಹೆ ನೀಡಿದ್ದಾರೆ.
ಕೊರೊನಾ 3ನೇ ಅಲೆಗಳ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು, ಟೆಸ್ಟಿಂಗ್, ಟ್ರೇಸಿಂಗ್, ಟ್ರೀಟ್ ಮೆಂಟ್ ಸೂತ್ರ ಪ್ರಸ್ತಾಪ ಮಾಡಿ ಯಶಸ್ವಿಯಾಗಿ ಕೊರೊನಾ ನಿಯಂತ್ರಣ ಮಾಡಿದ್ದರು.
ಶೀಘ್ರವೇ ಟೆಸ್ಟ್ ಮಾಡುವುದು, ಟೆಸ್ಟ್ ಮಾಡಿದ ಬಳಿಕ ಸೋಂಕಿತರನ್ನು ಟ್ರೇಸ್ ಮಾಡುವುದು ಮತ್ತು ಸೋಂಕಿತರಿಗೆ ಶೀಘ್ರವೇ ಚಿಕಿತ್ಸೆ ಕೊಡಲು ಕ್ರಮವಹಿಸುವುದು 3ಟಿ ಸೂತ್ರ. ಇದನ್ನು ಎಲ್ಲಾ ರಾಜ್ಯಗಳು ಮತ್ತೊಮ್ಮೆ ಅನುಷ್ಠಾನ ಮಾಡುವಂತೆ ಪ್ರಧಾನಿಗಳು ಸಲಹೆ ನೀಡಿದರು.