Webdunia - Bharat's app for daily news and videos

Install App

ಜುಲೈನಲ್ಲಿ ಭರ್ಜರಿ 1.16 ಲಕ್ಷ ಕೋಟಿ ರು. ಜಿಎಸ್ಟಿ ಸಂಗ್ರಹ!

Webdunia
ಸೋಮವಾರ, 2 ಆಗಸ್ಟ್ 2021 (14:49 IST)
ನವದೆಹಲಿ(.02): ಕೋವಿಡ್ 2ನೇ ಅಲೆ ಮುಗಿದು, ಆರ್ಥಿಕತೆ ಚೇತರಿಕೆ ಆಗುತ್ತಿರುವ ಲಕ್ಷಣಗಳನ್ನು ಸರಕು-ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹ ತೋರಿಸಿದೆ. ಜುಲೈ ತಿಂಗಳಲ್ಲಿ ಭರ್ಜರಿ 1.16 ಲಕ್ಷ ಕೋಟಿ ರು. ಜಿಎಸ್ಟಿ ಸಂಗ್ರಹ ಆಗಿದ್ದು, ಇದು ಈ ವಿತ್ತೀಯ ವರ್ಷದಲ್ಲಿ 2ನೇ ಅತಿ ಗರಿಷ್ಠ ಜಿಎಸ್ಟಿ ಸಂಗ್ರಹವಾಗಿದೆ.

* ಭರ್ಜರಿ 1.16 ಲಕ್ಷ ಕೋಟಿ ರು. ಜಿಎಸ್ಟಿ ಸಂಗ್ರಹ
* ಈ ವಿತ್ತೀಯ ವರ್ಷದ 2ನೇ ಗರಿಷ್ಠ
* ಆರ್ಥಿಕ ಚೇತರಿಕೆಯ ಲಕ್ಷಣ ಇದು
ಕಳೆದ ವರ್ಷ ಜುಲೈನಲ್ಲಿ ಮೊದಲನೇ ಕೋವಿಡ್ ಅಲೆ ವ್ಯಾಪಕವಾಗಿತ್ತು. ಆಗ 87,422 ಕೋಟಿ ರು. ಸಂಗ್ರಹವಾಗಿತ್ತು. ಅದಕ್ಕೆ ಹೋಲಿಸಿದರೆ ಈಗಿನ ಸಂಗ್ರಹ ಶೇ.33ರಷ್ಟುಅಧಿಕ. ಇನ್ನು ಈ ವಿತ್ತೀಯ ವರ್ಷದ ಆರಂಭದ ಮಾಸವಾದ ಏಪ್ರಿಲ್ನಲ್ಲಿ ದಾಖಲೆಯ 1.41 ಲಕ್ಷ ಕೋಟಿ ರು. ಸಂಗ್ರಹವಾಗಿತ್ತು. ಇದಾದ ನಂತರದ ದಾಖಲೆ ಸಂಗ್ರಹ ಜುಲೈನಲ್ಲಾಗಿದೆ.
ಆದರೆ ಕೋವಿಡ್ 3ನೇ ಅಲೆ ತಾರಕಕ್ಕೇರಿದ್ದ ಜೂನ್ನಲ್ಲಿ 1 ಲಕ್ಷ ಕೋಟಿ ರು.ಗಿಂತ ಕೆಳಗೆ ಜಿಎಸ್ಟಿ ಸಂಗ್ರಹ ಇಳಿದಿತ್ತು.
ಈ ನಡುವೆ, ಮುಂದಿನ ತಿಂಗಳು ಕೂಡ ಜಿಎಸ್ಟಿ ಸಂಗ್ರಹ ಉತ್ತಮಗೊಳ್ಳಬಹುದು ಎಂದು ವಿತ್ತ ಸಚಿವಾಲಯ ವಿಶ್ವಾಸ ವ್ಯಕ್ತಪಡಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments