Select Your Language

Notifications

webdunia
webdunia
webdunia
webdunia

ಸೆ.20 ಸಂಜೆ ಸ್ವರ್ಣ ರಥ, ಗಜವಾಹನ ಉತ್ಸವ

ಸೆ.20 ಸಂಜೆ ಸ್ವರ್ಣ ರಥ
ಆರನೇ ದಿನ, ಸೆ.20ರಂದು ಸಂಜೆ ಉಯ್ಯಾಲೆ ಸೇವೆ ನಡೆಯುವುದಿಲ್ಲ. ಅದರ ಬದಲು ವಸಂತೋತ್ಸವವನ್ನು ಆಚರಿಸಲಾಗುತ್ತದೆ.

ರಾತ್ರಿ, ದೇವರನ್ನು ಗಜ ವಾಹನದ ಮೇಲೆ ಕುಳ್ಳಿರಿಸಲಾಗುತ್ತದೆ. ಗಜವನ್ನು ಸಾಮಜ (ಸಾಮವೇದದಿಂದ ಜನಿಸಿದ) ಎಂದೂ ಕರೆಯಲಾಗುತ್ತದೆ. ಗಜವು ಐಶ್ವರ್ಯದ ಸಂಕೇತ. ಹಿಂದೂ ಪುರಾಣ ಕಥೆಗಳಲ್ಲಿ ಬರುವಂತೆ, ಅದು ದೇವತೆಗಳ ಒಡೆಯ ಇಂದ್ರನ ವಾಹನ ಐರಾವತದ ಪ್ರತೀಕವೂ ಹೌದು. ಶ್ರೀಮದ್ಭಾಗವತ ಪುರಾಣದಲ್ಲಿ ಬರುವ ಗಜೇಂದ್ರ ಮೋಕ್ಷ ಎಂಬ ಕಥನದಲ್ಲಿ ಆನೆಯ ಉಲ್ಲೇಖವಿದೆ. ಆನೆಯನ್ನು ಮಹಾವಿಷ್ಣುವು (ಆದಿಮೂಲ) ಮೊಸಳೆ ಬಾಯಿಂದ ರಕ್ಷಿಸಿದ ಗಾಥೆಯಿದು.

ಇವುಗಳ ನೆನಪಿಗಾಗಿ ಮಹಾವಿಷ್ಣುವನ್ನು ಗಜ ವಾಹನದ ಮೇಲೆ ಕುಳ್ಳಿರಿಸಿ ಮೆರವಣಿಗೆಯಲ್ಲಿ ಅದ್ದೂರಿಯಿಂದ ಕರೆದೊಯ್ಯಲಾಗುತ್ತದೆ.

ಕಾರ್ಯಕ್ರಮಗಳು ಇಂತಿವೆ:

ಸ್ವರ್ಣರಥ............ಸಾಯಂಕಾಲ 5.00 ಗಂಟೆಯಿಂದ 6.00 ಗಂಟೆಯವರೆಗೆ
ಗಜವಾಹನ........ರಾತ್ರಿ 9.00 ಗಂಟೆಯಿಂದ 11.00 ಗಂಟೆಯವರೆಗೆ
ಸರ್ವದರ್ಶನ.......ಬೆಳಿಗ್ಗೆ 6.00 ಗಂಟೆಯಿಂದ ಮಧ್ಯಾಹ್ನ 12.00 ಗಂಟೆಯವರೆಗೆ
ಪೂಲಂಗಿ ಸರ್ವದರ್ಶನ....ರಾತ್ರಿ 8.00 ಗಂಟೆಯಿಂದ ಪ್ರಾತಕಾಲ 12.30ರವರೆಗೆ

Share this Story:

Follow Webdunia kannada