Select Your Language

Notifications

webdunia
webdunia
webdunia
webdunia

ಸೆ.19 ಬೆಳಿಗ್ಗೆ ಮೋಹಿನಿ ಅವತಾರ

ಸೆ.19 ಬೆಳಿಗ್ಗೆ ಮೋಹಿನಿ ಅವತಾರ
ತಿರುಪತಿ ಬ್ರಹ್ಮೋತ್ಸವದ ಐದನೇ ದಿನ, ಅಂದರೆ ಸೆ.19ರಂದು ಬೆಳಿಗ್ಗೆ ಮಹಾವಿಷ್ಣುವಿನ ಮೋಹಿನಿ ಅವತಾರವನ್ನು ನೆನಪಿಸುವ ಮೋಹಿನಿ ಅವತಾರೋತ್ಸವಂ ಜರುಗುತ್ತದೆ.

ಪುರಾಣದ ಪ್ರಕಾರ, ದೇವತೆಗಳು ಮತ್ತು ದಾನವರು ಕ್ಷೀರಸಾಗರ ಮಥನ ಮಾಡಿದಾಗ, ಅಮೃತ ಮತ್ತಿತರ ಸುವಸ್ತುಗಳು ಉತ್ಪತ್ತಿಯಾದವು. ಅಮೃತಕ್ಕಾಗಿ ದೈತ್ಯರು ಮತ್ತು ದೇವತೆಗಳು ನನಗೆ ಮೊದಲು, ತನಗೆ ಮೊದಲು ಎಂದು ಜಗಳಕ್ಕಿಳಿದಾಗ, ಮೋಹಿನಿ ಅವತಾರ ತಾಳಿ, ದಾನವರನ್ನು ಮರುಳುಗೊಳಿಸಿ ಅಮೃತವನ್ನು ದೇವತೆಗಳಿಗೆ ಹಂಚಿದ.

ದೇವರ ವಿಗ್ರಹವನ್ನು ಮೋಹಿನಿ ರೂಪದಲ್ಲಿ ಅಲಂಕಾರ ಮಾಡಲಾಗುತ್ತದೆ ಮತ್ತು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಲಾಗುತ್ತದೆ. ಕೃಷ್ಣ ದೇವರನ್ನು ಕೂಡ ಇದೇ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ. ಕ್ಷೀರಸಾಗರ ಮಥನ ಕಾಲದಲ್ಲಿ ಮಹಾವಿಷ್ಣುವು ದೇವತೆಗಳಿಗೆ ನೀಡಿದ ಸಹಕಾರದ ಸ್ಮರಣೆಗಾಗಿ ಈ ಉತ್ಸವ.

ಬೆಳಿಗ್ಗೆ 9.00 ಗಂಟೆಯಿಂದ 11.00 ಗಂಟೆಯವರೆಗೆ ಈ ಉತ್ಸವ ಜರುಗಲಿದೆ.

Share this Story:

Follow Webdunia kannada