ತಿರುಪತಿ ಬ್ರಹ್ಮೋತ್ಸವದ ನಾಲ್ಕನೇ ದಿನ ಬೆಳಿಗ್ಗೆ ಅಂದರೆ ಸೆ.18ರಂದು ದೇವರ ಮೂರ್ತಿಗಳನ್ನು ಕಲ್ಪವೃಕ್ಷ ವಾಹನದಲ್ಲಿ ಕುಳ್ಳಿರಿಸಿ ಮೆರವಣಿಗೆ ನಡೆಸಲಾಗುತ್ತದೆ.
ಕಲ್ಪ ವೃಕ್ಷ ಎಂಬುದು ವರ ನೀಡುವ ಅಂದರೆ ಕಲ್ಪಿಸಿದ್ದನ್ನು ನೀಡುವ ವೃಕ್ಷ ಎಂಬ ನಂಬಿಕೆ ಇದೆ. ದೇವರು ತನ್ನ ಭಕ್ತರ ವಾಂಛೆಗಳನ್ನು ಈಡೇರಿಸಿ ವರ ನೀಡುತ್ತಾನೆ ಎಂಬುದರ ಸಂಕೇತವೇ ಕಲ್ಪ ವೃಕ್ಷ ಆಕಾರದಲ್ಲಿರುವ ಈ ವಾಹನ.
ಇದರ ಸಮಯ ಬೆಳಿಗ್ಗೆ 9.00 ಗಂಟೆಯಿಂದ 11 ಗಂಟೆಯವರೆಗೆ.