Select Your Language

Notifications

webdunia
webdunia
webdunia
webdunia

ಸೆ.16 ಸಂಜೆ ಹಂಸವಾಹನ ಉತ್ಸವ

ಸೆ.16 ಸಂಜೆ ಹಂಸವಾಹನ ಉತ್ಸವ
ಸೆ.16ರ ರಾತ್ರಿ ದೇವರನ್ನು ಉಯ್ಯಾಲೆ ಮಂಟಪಕ್ಕೆ ಕರೆದೊಯ್ದು ಅಲ್ಲಿ ಉಯ್ಯಾಲೆ ಸೇವೆ (ಉಂಜಲ್ ಸೇವೆ) ನೆರವೇರಿಸಲಾಗುತ್ತದೆ. ಆ ಬಳಿಕ ದೇವರನ್ನು ತಿರುಮಲದ ಬೀದಿಗಳಲ್ಲಿ ಹಂಸವಾಹನ ಮೂಲಕ ಮೆರವಣಿಗೆ ಮಾಡಲಾಗುತ್ತದೆ.

ಹಂಸವು ಪರಿಶುಭ್ರತೆಯ ಸಂಕೇತ. ಹಂಸವು ಅತ್ಯುಚ್ಚ ಮೇಧಾಶಕ್ತಿ ಹೊಂದಿದ್ದು, ಅದು ಕೆಡುಕು ಮತ್ತು ಒಳಿತನ್ನು ಸರಿಯಾಗಿ ಗುರುತಿಸುವ ಸಾಮರ್ಥ್ಯ ಹೊಂದಿರುತ್ತದೆ. ಇದರೊಂದಿಗೆ, ಹಂಸವು ಪ್ರತ್ಯಕ್ಷವಾಗಿ ಕಾಣಿಸುತ್ತದೆ. ಈ ಕಾರಣಕ್ಕಾಗಿಯೇ ಬ್ರಹ್ಮ ದೇವನು ಹಂಸವನ್ನು ತನ್ನ ವಾಹನವಾಗಿ ಬಳಸಿಕೊಳ್ಳುತ್ತಾನೆ ಮಾತ್ರವೇ ಅಲ್ಲ, ವೇದ ಮಂತ್ರಗಳ ಉಚ್ಚಾರಣೆಗೂ ಹಂಸವನ್ನೇ ಬಳಸುತ್ತಾನೆ. (ವೇದಗಳು ವಿಷ್ಣುವಿನ ಆತ್ಮದಿಂದ ಹುಟ್ಟಿಕೊಂಡವು ಎಂಬ ಪ್ರತೀತಿ ಇದೆ.)

ಕಾರ್ಯಕ್ರಮಗಳು ಇಂತಿವೆ:

ಉಂಜಲಸೇವಾ.... ರಾತ್ರಿ 7.00 ಗಂಟೆಯಿಂದ 8.00 ಗಂಟೆಯವರೆಗೆ
ಹಂಸವಾಹನ..... ರಾತ್ರಿ 9.00ಗಂಟೆಯಿಂದ 11 ಗಂಟೆಯವರೆಗೆ
ಸರ್ವದರ್ಶನ.......ಬೆಳಿಗ್ಗೆ 6.00 ಗಂಟೆಯಿಂದ ಸಾಯಂಕಾಲ 5.00 ಗಂಟೆಯವರೆಗೆ
ಸರ್ವದರ್ಶನ....... ರಾತ್ರಿ 7.00 ಗಂಟೆಯಿಂದ ಮಧ್ಯರಾತ್ರಿ 12.30 ಗಂಟೆಯವರೆಗೆ

Share this Story:

Follow Webdunia kannada