Article Tirupathi Brahmotsavam %e0%b2%b5%e0%b3%86%e0%b2%ac%e0%b3%8d%e2%80%8c%e0%b2%a6%e0%b3%81%e0%b2%a8%e0%b2%bf%e0%b2%af%e0%b2%be%e0%b2%a6%e0%b2%b2%e0%b3%8d%e0%b2%b2%e0%b2%bf %e0%b2%a4%e0%b2%bf%e0%b2%b0%e0%b3%81%e0%b2%aa%e0%b2%a4%e0%b2%bf %e0%b2%ac%e0%b3%8d%e0%b2%b0%e0%b2%b9%e0%b3%8d%e0%b2%ae%e0%b3%8b%e0%b2%a4%e0%b3%8d%e0%b2%b8%e0%b2%b5 107091100025_1.htm

Daily Horoscope

Select Your Language

Notifications

webdunia
webdunia
webdunia
webdunia

ವೆಬ್‌ದುನಿಯಾದಲ್ಲಿ ತಿರುಪತಿ ಬ್ರಹ್ಮೋತ್ಸವ

ವೆಬ್‌ದುನಿಯಾದಲ್ಲಿ ತಿರುಮಲ ಬ್ರಹ್ಮೋತ್ಸವ
WD
ಮಾನವಜೀವಿಯನ್ನು ಭೌತಿಕ ಜಗತ್ತಿನ ಕಾರ್ಗತ್ತಲೆಯಿಂದ ಬೆಳಕಿನೆಡೆಗೆ ಏರಿಸುವ ವಿಧಾನವೇ "ಉತ್ಸವ". ತಿರುಪತಿಯಲ್ಲಿ ನಾವು ಪ್ರತಿದಿನ ಉತ್ಸವಗಳನ್ನು ಕಾಣಬಹುದು. ಇವು ನಮ್ಮ ಅಂತಃಶಕ್ತಿಯನ್ನು ಜಾಗೃತಗೊಳಿಸಿ ದೈವೀಕ ಪ್ರಜ್ಞೆಯನ್ನು ನಮ್ಮೊಳಗೆ ಪಸರಿಸುತ್ತವೆ. ಶ್ರೀ ಶ್ರೀನಿವಾಸನ ಸನ್ನಿಧಿಯಿರುವ ತಿರುಮಲಗಿರಿಯಲ್ಲಿ ನಡೆಯುವ ಅತ್ಯಂತ ವೈಭವೋಪೇತ ಉತ್ಸವವೇ ಶ್ರೀವಾರಿ ಬ್ರಹ್ಮೋತ್ಸವ. ಈ ಉತ್ಸವವನ್ನು ಬ್ರಹ್ಮನೇ ಆರಂಭಿಸಿದ ಎಂಬ ಪ್ರತೀತಿಯ ಹಿನ್ನೆಲೆಯಲ್ಲಿ ಇದಕ್ಕೆ ಆ ಹೆಸರು. ಬ್ರಹ್ಮೋತ್ಸವದ ಅವಧಿಯಲ್ಲಿ ವಿಶ್ವಾದ್ಯಂತದಿಂದ ಲಕ್ಷಾಂತರ ಭಕ್ತಾದಿಗಳು ತಿರುಪತಿಗೆ ಆಗಮಿಸಿ ಶ್ರೀವೆಂಕಟೇಶ್ವರನ ವೈಭವವನ್ನು ಕಣ್ಣಾರೆ ಕಂಡು ಪುನೀತಭಾವದಿಂದ ಮರಳುತ್ತಾರೆ.

ಪ್ರತಿವರ್ಷಕ್ಕೊಮ್ಮೆ ನಡೆಯುವ ಈ ಉತ್ಸವವು 9 ದಿನಗಳ ಪರ್ಯಂತ ಮುಂದುವರಿಯುತ್ತದೆ. ಈ ಬಾರಿ ಬ್ರಹ್ಮೋತ್ಸವ ವಿಶೇಷವಾದುದು. ಅಧಿಕ ಮಾಸದ ಕಾರಣದಿಂದಾಗಿ ಎರಡು ಬಾರಿ ಬ್ರಹ್ಮೋತ್ಸವ ನಡೆಯಲಿದೆ. ಮೊದಲ ಸಾಲಕಟ್ಲ ಬ್ರಹ್ಮೋತ್ಸವವು ಸೆ.15ರಿಂದ 23, 2007ವರೆಗೆ ನಡೆಯಲಿದ್ದರೆ, ಎರಡನೇ ನವರಾತ್ರಿ ಬ್ರಹ್ಮೋತ್ಸವವು ಅಕ್ಟೋಬರ್ 12ರಿಂದ 20, 2007ರವರೆಗೆ ನಡೆಯಲಿದೆ.

ಉತ್ಸವಾದಿಗಳ ವಿವರ ಹೀಗಿದೆ:

ಸೆ. 14ರಂದು ಅಂಕುರಾರ್ಪಣೆಯೊಂದಿಗೆ ಧಾರ್ಮಿಕ ವಿಧಿಗಳಿಗೆ ಚಾಲನೆ ದೊರೆಯುತ್ತದೆ.

15ರಂದು ಬೆಳಿಗ್ಗೆ ಧ್ವಜಾರೋಹಣ, ಸಂಜೆ ಪೆದ್ದಶೇಷ ವಾಹನ ಉತ್ಸವ

16ರಂದು ಬೆಳಿಗ್ಗೆ ಚಿನ್ನಶೇಷ ವಾಹನ ಉತ್ಸವ, ಹಂಸ ವಾಹನ ಉತ್ಸವ

17ರಂದು ಬೆಳಿಗ್ಗೆ ಸಿಂಹ ವಾಹನ, ಸಂಜೆ ಮುತ್ಯಪುಪಂದಿರಿ ವಾಹನ ಉತ್ಸವ

18ರಂದು ಬೆಳಿಗ್ಗೆ ಕಲ್ಪವೃಕ್ಷವಾಹನ, ಸಂಜೆ ಸರ್ವಭೂಪಾಲ ವಾಹನ ಉತ್ಸವ

19ರಂದು ಬೆಳಿಗ್ಗೆ ಮೋಹಿನಿ ಅವತಾರಂ, ಸಂಜೆ ಗರುಡ ವಾಹನ ಉತ್ಸವ

20ರಂದು ಬೆಳಿಗ್ಗೆ ಹನುಮಂತ ವಾಹನಂ, ಸಂಜೆ ಸ್ವರ್ಣ ರಥೋತ್ಸವಂ

21ರಂದು ಬೆಳಿಗ್ಗೆ ಗಜ ವಾಹನಂ, ಸಂಜೆ ಸರ್ವಭೂಪಾಲ ವಾಹನ ಉತ್ಸವ

22ರಂದು ಬೆಳಿಗ್ಗೆ ಸೂರ್ಯಪ್ರಭ ವಾಹನಂ ಮತ್ತು ಸಂಜೆ ಚಂದ್ರಪ್ರಭ ವಾಹನ ಉತ್ಸವ

23ರಂದು ಬೆಳಿಗ್ಗೆ ರಥೋತ್ಸವಂ, ಸಂಜೆ ಅಶ್ವ ವಾಹನ ಉತ್ಸವ

24ರಂದು ಬೆಳಿಗ್ಗೆ ಚಕ್ರಸ್ನಾನಂ ಮತ್ತು ಸಂಜೆ ಧ್ವಜಾವರೋಹಣ.

ಬ್ರಹ್ಮಾಂಡದೊಡೆಯನ ಬ್ರಹ್ಮೋತ್ಸವ ವೈಭವವನ್ನು "ವೆಬ್‌ದುನಿಯಾ ಕನ್ನಡ" ತಾಣವು ಕನ್ನಡಿಗರಿಗೆ ವೀಡಿಯೋದೊಂದಿಗೆ ವೀಕ್ಷಿಸುವ ಅವಕಾಶ ಕಲ್ಪಿಸಲಿದೆ. ಸೆ.14ರಿಂದ ವೆಬ್‌ದುನಿಯಾ ಕನ್ನಡ ತಾಣವು 9 ದಿನಗಳ ಕಾಲದ ಉತ್ಸವ ವೈಭವವನ್ನು ನಿಮ್ಮೆದುರು ತೆರೆದಿಡಲಿದೆ. ನಿರೀಕ್ಷಿಸಿ.

Share this Story:

Follow Webdunia kannada