Select Your Language

Notifications

webdunia
webdunia
webdunia
webdunia

ಒಣದ್ರಾಕ್ಷಿ ಸೇರ್ಪಡೆ: ಇನ್ನಷ್ಟು ರುಚಿಕರವಾಗಲಿದೆ ತಿರುಪತಿ ಲಡ್ಡು

ಒಣದ್ರಾಕ್ಷಿ ಸೇರ್ಪಡೆ: ಇನ್ನಷ್ಟು ರುಚಿಕರವಾಗಲಿದೆ ತಿರುಪತಿ ಲಡ್ಡು
ತಿರುಮಲ , ಗುರುವಾರ, 29 ಸೆಪ್ಟಂಬರ್ 2011 (14:09 IST)
WD
ತಿರುಪತಿ ವೆಂಕಟೇಶ್ವರ ಸ್ವಾಮಿಯ ಪ್ರಸಾದವಾಗಿರುವ ಲಡ್ಡುವಿನ ಗುಣಮಟ್ಟವನ್ನು ಹೆಚ್ಚಿಸಿ ಇನ್ನಷ್ಟು ರುಚಿಕರವಾಗಿಸಲು ತಿರುಪತಿ ತಿರುಮಲ ದೇವಸ್ಥಾನ ಆಡಳಿತ ಮಂಡಳಿ (ಟಿಟಿಡಿ) ಬುಧವಾರ ನಡೆದ ಸಭೆಯಲ್ಲಿ ನಿರ್ಧರಿಸಿದೆ.

ತಿರುಪತಿ ಪ್ರಸಾದ ಲಡ್ಡುವಿನ ಗುಣಮಟ್ಟ ಹೆಚ್ಚಿಸಿ ಇದರೊದಿಗೆ ಒಣ ದ್ರಾಕ್ಷಿಯನ್ನು ಬೆರೆಸಲು ಕೂಡ ನಿರ್ಧರಿಸಲಾಗಿದೆ. ಇದಕ್ಕಾಗಿ ನಾಲ್ಕು ಲಕ್ಷ ಕೆಜಿ ಒಣ ದ್ರಾಕ್ಷಿಯನ್ನು ಖರೀದಿಸಲು ಟಿಟಿಡಿ ನಿರ್ಧರಿಸಿದೆ.

ಮೊದಲ ಹಂತದಲ್ಲಿ ಒಂದು ಲಕ್ಷ ಕೆಜಿ ಒಣ ದ್ರಾಕ್ಷಿಯನ್ನು ಖರೀದಿಸಲಿದ್ದು, ಉಳಿದದ್ದನ್ನು ಮುಂದಿನ ದಿನಗಳಲ್ಲಿ ಖರೀದಿಸಲು ಟಿಟಿಡಿ ತಿಳಿಸಿದೆ.

ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಟಿಟಿಡಿ ಮಂಡಳಿ ಅಧ್ಯಕ್ಷ ಕೆ. ಬಾಪಿರಾಜು, ಕೇಂದ್ರ ವಿಚಕ್ಷಣ ಆಯೋಗದ ನಿಯಮಾನುಸಾರ ಪ್ರಸಾದಕ್ಕೆ ಅಗತ್ಯವಾ‌ದ ವಸ್ತುಗಳನ್ನು ಖರೀದಿಸಲಾಗುವುದು. ಈ ಕುರಿತು ಶೀಘ್ರದಲ್ಲೇ ಶಿಫಾರಸು ಪತ್ರದ ಪ್ರತಿಗಳನ್ನು ಟಿಟಿಡಿಯ ಎಲ್ಲ ವಿಭಾಗಗಳಿಗೂ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.

ಇದೇ ವೇಳೆ, ಅಡ್ಡಪಲ್ಲಕ್ಕಿ ಹೊರುವವರಿಗೆ ನೀಡುತ್ತಿರುವ ಪರಿಹಾರ ಭತ್ಯೆಯನ್ನು 300 ರೂ.ನಿಂದ ಒಂದು ಸಾವಿರ ರೂ.ಗೆ ಹೆಚ್ಚಿಸಲಾಗಿದೆ ಎಂದು ಹೇಳಿದ ಟಿಟಿಡಿ ಅಧ್ಯಕ್ಷರು, ದೇವಸ್ಥಾನದ ಬಿಐಆರ್‌ಆರ್‌ಡಿ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿಸ್ಟ್‌ ಹುದ್ದೆಯನ್ನೂ ಸೃಷ್ಟಿಸಲು ಟಿಟಿಡಿ ಆಡಳಿತ ಮಂಡಳಿಯು ಅನುಮೋದನೆ ನೀಡಿದೆ ಎಂದು ಹೇಳಿದ್ದಾರೆ.

ಶ್ರೀ ವೆಂಕಟೇಶ್ವರ ವೈದ್ಯ ವಿಜ್ಞಾನ ಸಂಸ್ಥೆ (ಎಸ್‌ವಿಐಎಂಎಸ್‌)ಯ ಮೂತ್ರಪಿಂಡ ಶಾಸ್ತ್ರ ವಿಭಾಗ (ನೆಫ್ರಾಲಜಿ)ಕ್ಕೆ 3.75 ಕೋಟಿ ರೂ. ಮಂಜೂರು ಮಾಡಲು ಅನುಮೋದನೆ ನೀಡಿದೆ. ಅಲ್ಲದೇ ತಿರುಪತಿ ಹಾಗೂ ತಿರುಮಲದಲ್ಲಿರುವ ಅತಿಥಿಗೃಹಗಳ ಹಾಸಿಗೆ ಸಂಖ್ಯೆಯನ್ನು ಹೆಚ್ಚಿಸಲು ಸಹಾ ನಿರ್ಧರಿಸಲಾಗಿದೆ.

Share this Story:

Follow Webdunia kannada